ಮಕ್ಕಳು ಮೊಬೈಲ್‌ ಬಳಕೆ ನಿಷೇಧ ಒಳ್ಳೆಯ ಬೆಳವಣಿಗೆ : ಜಿ. ಪರಮೇಶ್ವರ್

ಎಲ್ಲಾ ಕ್ಷೇತ್ರಗಳಿಗೂ ಸಮತೋಲನ ಕಾಯ್ದುಕೊಳ್ಳಲಾಗಿದೆ

ಬೆಂಗಳೂರು : 16 ವರ್ಷದ ಶಾಲಾ ಮಕ್ಕಳು ಮೊಬೈಲ್ ಬಳಕೆ ನಿಷೇಧ ಇದೊಂದು ಒಳ್ಳೆಯ ಬೆಳವಣಿಗೆ ಎಂದು  ಸಿಎಂ ಸಿದ್ದರಾಮಯ್ಯ ರ ಬಜೆಟ್ ಮಂಡನೆ  ಕುರಿತು ಗೃಹ ಸಚಿವ ಜಿ. ಪರಮೇಶ್ವರ್‌ ಪ್ರತಿಕ್ರಿಯಿಸಿದ್ದಾರೆ.
  ಈ ಬಜೆಟ್‌ನಲ್ಲಿ ಎಲ್ಲಾ ಕ್ಷೇತ್ರವನ್ನು ಸಮತೋಲನ  ಮಾಡಲಾಗಿದೆ. ಯಾವುದೇ ವಲಯ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ.  ವಿಶೇಷವಾಗಿ ನೇಮಕಾತಿ ಬಗ್ಗೆ ಯುವಕರ ಆತಂಕ ಇತ್ತು. 56 ಸಾವಿರ ನೇಮಕಾತಿಯ ತೀರ್ಮಾನ ಕೂಡ ಮಾಡಿದ್ದಾರೆ.

ರೈತ ಸಮುದಾಯಕ್ಕೆ 30 ಸಾವಿರ ಕೋಟಿ ಸಾಲ ಕೊಡುವ ತೀರ್ಮಾನ ಮಾಡಿದ್ದಾರೆ. ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಬಗ್ಗೆಯೂ ತೀರ್ಮಾನ ಮಾಡಿದ್ದಾರೆ.  ಬೆಂಗಳೂರಿಗೆ ಮೂಲ ಸೌಕರ್ಯ ದೃಷ್ಟಿಯಿಂದ ಅಂಡರ್ ಗ್ರೌಂಡ್ ಟನಲ್ ಬಗ್ಗೆಯೂ ತೀರ್ಮಾನ ಮಾಡಿದ್ದಾರೆ. 

ಬಿಜೆಪಿ ಪ್ರತಿಭಟನೆ ವಿಚಾರ : ಕೇಂದ್ರ ಸರಕಾರ 16 ಲಕ್ಷ ಕೋಟಿ ಸಾವಿರ ಸಾಲ ತೋರಿಸಿದ್ದಾರೆ. ಸಾಲ ತಗೊಳ್ಳೋದು ಒಂದು ಸಿಸ್ಟಮ್ ಅಷ್ಟೇ.  ಎಲ್ಲಾ ದೇಶದಲ್ಲೂ ಇದು ಇದೆ. ಹಿಂದೆ ಅವರೇನು ಮಾಡಿದ್ದರು.  ಅವರು ಸಾಲನೇ ಮಾಡಿರಲಿಲ್ವಾ.  ಮಾತಾಡೋಕೇನು ಮಾತಾಡ್ತಾರೆ.   ಕೇಂದ್ರ ಸರ್ಕಾರವೇ 3 ಪರ್ಸೆಂಟ್ ದಾಟಿ ಹೋಗಿದ್ದಾರೆ.  ಆರ್ಥಿಕ ಸ್ಥಿರತೆಯನ್ನ ಸಿದ್ದರಾಮಯ್ಯ ಕಾಪಾಡಿದ್ದಾರೆ ಎಂದು ತಿಳಿಸಿದರು. 

ಲೆಹರ್‌ ಸಿಂಗ್‌ ಮೆಚ್ಚುಗೆ : ಈ ಬಗ್ಗೆ ಟ್ವೀಟ್​ ಮಾಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ, ‘ಕರ್ನಾಟಕ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ. ಈ ವಿಷಯವನ್ನು ನಾನು ಸಂಸತ್ತಿನಲ್ಲಿ ವಿಶೇಷ ಪ್ರಸ್ತಾಪದ ಮೂಲಕ ಧ್ವನಿ ಎತ್ತಿದ್ದೆ’ ಎಂದು ಹೇಳಿದ್ದಾರೆ.

More articles

Latest article

Most read