Sunday, July 14, 2024

ಬೇಲ್ ಕಾಪಿ ಸಕಾಲಕ್ಕೆ ಜೈಲು ಅಧಿಕಾರಿಗಳ ಕೈ ಸೇರಿದ್ರು ಕರವೇ ಅಧ್ಯಕ್ಷರು ಬಿಡುಗಡೆ ಮಾಡಿಲ್ಲ : ವಕೀಲ ಕುಮಾರ್ ಆರೋಪ

Most read

ಬೇಲ್ ಕಾಪಿ ಸಕಾಲಕ್ಕೆ ಜೈಲು ಅಧಿಕಾರಿಗಳ ಕೈ ಸೇರಿದ್ರು ಬಿಡುಗಡೆ ಮಾಡಿಲ್ಲ. ಕರವೇ ಅಧ್ಯಕ್ಷ ನಾರಾಯಣಗೌಡ ಬಿಡುಗಡೆ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿವೆ ಎಂದು ನಾರಾಯಣಗೌಡ ಪರ ವಕೀಲ ಕುಮಾರ್ ಆರೋಪ ಮಾಡಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಕರವೇ ನಾರಾಯಣ ಗೌಡ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಬೇಲ್ ಕಾಫಿ ಸಕಾಲಕ್ಕೆ ಜೈಲು ಅಧಿಕಾರಿಗಳ ಕೈ ಸೇರಿದ್ರು ಬಿಡುಗಡೆ ಮಾಡಿಲ್ಲ. ನಾರಾಯಣ ಗೌಡರ ಬಿಡುಗಡೆ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

6:30ರ ಸುಮಾರಿಗೆ ಬೇಲ್ ಕಾಪಿ ಜೈಲು ಅಧಿಕಾರಿಗಳ ಕೈ ಸೇರಿದೆ. ಆದರೂ ಜೈಲು ಅಧಿಕಾರಿಗಳು ಬಿಡುಗಡೆಗೆ ಮೀನಾಮೇಷ ಎಣಿಸಲಾಗುತ್ತಿದೆ. ಜೈಲು ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೆವೆ ಎನ್ನುತ್ತಿದ್ದಾರೆ.
ಕಾನೂನು ಸುವ್ಯವಸ್ಥೆ ಹದಗೇಡುತ್ತದೆ ಎಂಬ ಉದ್ದೇಶವಿರಬಹುದು ರಾತ್ರಿ 10:30ವರೆಗೂ ಬಿಡುಗಡೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.

ಇನ್ನೂ ಹಳೆಯ ಕೇಸ್ಗಳಲ್ಲಿ ಕರವೇ ನಾರಾಯಣ ಗೌಡ ಬಂಧಿಸುವ ವಿಚಾರವಾಗಿ ಮಾತನಾಡಿ, ಇಲ್ಲಿಯವರೆಗೆ ಯಾವುದೇ ಠಾಣಾ ಪೊಲೀಸರು ಬಾಡಿ ವಾರಂಟ್ ಪಡೆದಿಲ್ಲ. ಯಾವ ಆಧಾರದ ಮೇಲೆ ಗೌಡರ ಬಂಧನಕ್ಕೆ ತಯಾರಿ ನಡೆಸಿದ್ದಾರೋ ಗೊತ್ತಿಲ್ಲ. ಹಲಸೂರು ಗೇಟ್ ಠಾಣೆ ಕೇಸ್ ಜಾಮೀನು ತೆಗೆದುಕೊಳ್ಳಬಹುದಾದ ಅಫೆನ್ಸ್ ಇದೆ, ಆದ್ರೆ ಕುಮಾರಸ್ವಾಮಿ ಲೇಔಟ್ ಠಾಣೆ ಕೇಸ್ ನಾನ್ ಬೇಲೆಬಲ್ ಅಫೇನ್ಸ್ ನೀಡಲಾಗಿದೆ.

ಒಂದು ವೇಳೆ ನಾರಾಯಣ ಗೌಡರನ್ನು ಬಂಧಿಸಿದ್ರೆ. ಕಾನೂನು ಹೋರಾಟ ಮಾಡಲಾಗುವುದು. ವಕೀಲರ ತಂಡ ಸಮರ್ಥವಾಗಿ ವಾದ ಮಂಡನೆ ಮಾಡಿ. ಬಂಧನವಾದ್ರೆ ನಾಳೆಯೇ ಜಾಮೀನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More articles

Latest article