ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಂತಿಮವಾಗಿ ಕಣದಲ್ಲಿ 9 ಅಭ್ಯರ್ಥಿಗಳು ಉಳಿದಿದ್ದಾರೆ .
ಅಂತಿಮ ಕಣದಲ್ಲಿದ್ದ 14 ಅಭ್ಯರ್ಥಿಗಳ ಪೈಕಿ 5 ಮಂದಿ ಇಂದು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರು.
ಒಟ್ಟು 16 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆಯಾಗಿದ್ದು, ಅದರಲ್ಲಿ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಇಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿತ್ತು.
ಕಾಂಗ್ರೆಸ್‌ನಿಂದ ಉಮೇಶ ಮೇಟಿ, ಬಿಜೆಪಿಯ ವೀರಭದ್ರಯ್ಯ ಚರಂತಿಮಠ ಸೇರಿ ಇತರರು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ದವಾಗಿವೆ.
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಬಾಬುಷಾ ರೊಳ್ಳಿ, ಪರಶುರಾಮ ನೀಲನಾಯಕ, ಬಾಬುಷಾ ರೊಳ್ಳಿ ಅವರ ನಾಮಪತ್ರಗಳು ತಿರಸ್ಕೃತಗೊಂಡವು.
ಉತ್ತಮ ಪ್ರಜಾಕೀಯ ಪಾರ್ಟಿಯ ಅಂತೋಷ ಸವ್ವಾಸೆ, ಜನತಾ ಚಳವಳಿ ಭಾರತ ಪಕ್ಷದ ತೇಜೋರಾಮ ಶೆಟ್ಟಿ ದೇವಾಂಗ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಗರಾಜ ಕಲಕುಟಗರ, ಬ್ಲೂ ಇಂಡಿಯಾ ಪಾರ್ಟಿಯ ತಳವಾರ ಶಿವಕುಮಾರ, ಆಲ್ ಇಂಡಿಯಾ ಜನರಕ್ಷ ಪಾರ್ಟಿಯಿಂದ ಸಿದ್ದಪ್ಪ ಗೋಡಿ, ಪಕ್ಷೇತರದಿಂದ ಅಬ್ದುಲ್ ರಜಾಕ ಬಾಳಿಕಾಯಿ, ಆಯ್ಯುಬಖಾನ ಲಾಲಸಾಬ ಬಾಗೇವಾಡಿ, ಆನಂದ ಜಕಾತಿ, ಗೋವಿಂದಪ್ಪ ಬಳ್ಳಾರಿ, ಪ್ರಶಾಂತ ಶರಣಪ್ಪ ರಾವ, ಯಂಕಪ್ಪ ಬಾಪಣ್ಣ ಕಮತಗಿ, ರವಿ ಶಿವಪ್ಪ ಪಡಸಲಗಿ ಅವರು ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಬಾಬುಷಾ ರೊಳ್ಳಿ, ಪರಶುರಾಮ ನೀಲನಾಯಕ, ಬಾಬುಷಾ ರೊಳ್ಳಿ ಅವರ ನಾಮಪತ್ರಗಳು ತಿರಸ್ಕೃತಗೊಂಡಿದ್ದವು.

