ನ್ಯಾಯಾಂಗದಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಸಲ್ಲದು: ಸಿಜೆಐ ಬಿ.ಆರ್‌.ಗವಾಯಿ ಅಭಿಪ್ರಾಯ

Most read

ಮುಂಬೈ: ನ್ಯಾಯಾಂಗವು ಕಾರ್ಯಾಂಗದ ಹಸ್ತಕ್ಷೇಪದಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು ಎನ್ನುವುದು ಡಾ.ಬಿ.ಆರ್‌.ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಭೂಷಣ್‌ ರಾಮಕೃಷ್ಣ ಗವಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದ ಗವಾಯಿ ಅವರಿಗೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಕ್ಕೆ ಹಕ್ಕುಗಳನ್ನು ನೀಡಿದೆ. ಅಂಬೇಡ್ಕರ್‌ ಅವರ ಪ್ರಕಾರ, ನ್ಯಾಯಾಂಗವು ನಾಗರಿಕರ ಹಕ್ಕುಗಳ ರಕ್ಷಕರಾಗಿದ್ದು, ಕಾವಲುನಾಯಿಯಂತೆ ಕೆಲಸ ಮಾಡಬೇಕು. ಸಂವಿಧಾನವು ಸ್ಥಿರವಾಗಿರಲು ಸಾಧ್ಯವಿಲ್ಲ, ಸದಾ ವಿಕಸನಗೊಳ್ಳುತ್ತಿರಬೇಕು ಎಂದು ಬಯಸಿದ್ದರು ಎಂದು ಗವಾಯಿ ಹೇಳಿದರು.

More articles

Latest article