ಆಟೋ ತಗುಲಿದ್ದಕ್ಕೆ ಆಟೋ ಚಾಲಕನ ಹತ್ಯೆ; ನಾಲ್ವರು ಆರೋಪಿಗಳ ಬಂಧನ

Most read


ಬೆಂಗಳೂರು: ಆರ್‌ ಟಿ ನಗರದ ಸಮೀಪ ಇರುವ ರಹಮತ್‌ ನಗರದಲ್ಲಿ ಆಟೋ ಡಿಕ್ಕಿ ಹೊಡೆಯಿತು ಎಂಬ ಕಾರಣಕ್ಕೆ ನಡೆದ ಜಗಳದಲ್ಲಿಆಟೋ ಚಾಲಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. 27 ವರ್ಷದ ಸಲ್ಮಾನ್ ಹತ್ಯೆಗೀಡಾದ ದುರ್ದೈವಿ ಚಾಲಕ. ಪ್ರಕರಣ ದಾಖಲಿಸಿಕೊಂಡಿರುವ ಆರ್.ಟಿ.ನಗರ ಪೊಲೀಸರು, ರಹಮತ್ ನಗರದ ನಿವಾಸಿಗಳಾದ ಸೈಯದ್ ಪರ್ವೇಜ್, ಆತನ ಸಹೋದರ ಸೈಯದ್ ತಬ್ರೇಜ್ ಮತ್ತು ಸಂಬಂಧಿಕರಾದ ಸಾದಿಕ್, ತೌಸಿಫ್ ಎಂಬವರನ್ನು ಬಂಧಿಸಿದ್ದಾರೆ.

 ಆರೋಪಿಗಳಲ್ಲಿ ಒಬ್ಬನಾದ ಸೈಯದ್ ಪರ್ವೇಜ್ ತಂದೆಗೆ ರಹಮತ್ ನಗರದಲ್ಲಿ ಆಟೊ ಡಿಕ್ಕಿಯಾಗಿತ್ತು. ಇದೇ ಕಾರಣಕ್ಕೆ ಪರ್ವೇಜ್‌ನ ತಂದೆ, ಆಟೊ ಚಾಲಕ ಸಲ್ಮಾನ್‌ಗೆ ಬೈದಿದ್ದರು. ಇದರಿಂದ ಕೋಪಗೊಂಡ ಸಲ್ಮಾನ್, ಅವರ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆರೋಪಿಗಳು ಸಲ್ಮಾನ್ ಮನೆಯ ಎದುರು ಹೋಗಿ ಗಲಾಟೆ ಆರಂಭಿಸಿದ್ದರು. ಜಗಳ ವಿಕೋಪಕ್ಕೆ ತಿರುಗಿದಾಗ ಆರೋಪಿಗಳು, ಸಲ್ಮಾನ್‌ಗೆ ಕಾಲಿನಿಂದ ಒದ್ದು ತೀವ್ರವಾಗಿ ಹಲ್ಲೆ ಮಾಡಿದ್ದರು. ಗಾಯಗೊಂಡಿದ್ದ ಸಲ್ಮಾನ್‌ನನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಲ್ಮಾನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article