ಆಟೋ ಗ್ಯಾಸ್ ಆಭಾವ ತಾತ್ಕಾಲಿಕ : ವದಂತಿಗಳಿಗೆ ಕಿವಿಗೊಡದಂತೆ ಸೂಚನೆ

ಬೆಂಗಳೂರು : ರಾಜ್ಯದ ಆಟೋ ಗ್ಯಾಸ್ ಬಂಕ್‍ಗಳಲ್ಲಿ ಇಂಧನ ಕೊರತೆಯಾಗಿದೆ ಎಂಬ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ.

 ಕೆಲವು ಖಾಸಗಿ ಸರಬರಾಜು ಸಂಸ್ಥೆಗಳಲ್ಲಿ ಕೊರತೆ ಕಂಡು ಬಂದಿದ್ದರೂ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಗ್ಯಾಸ್ ಪೂರೈಸುತ್ತಿವೆ. ಸರ್ಕಾರಿ ಗ್ಯಾಸ್ ಸರಬರಾಜು ಸಂಸ್ಥೆಗಳಾದ ಐಒಸಿ, ಬಿಪಿಸಿ ಮತ್ತು ಹೆಚ್‍ಪಿಸಿ ಈ ಮೊದಲು ದಿನಕ್ಕೆ ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಪೂರೈಸುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಸರಿದೂಗಿಸಲು ಇದನ್ನು 83.58 ಮೆಟ್ರಿಕ್ ಟನ್‍ಗೆ ಹೆಚ್ಚಿಸಲಾಗಿದೆ.

ಕಳೆದ ಐದು ದಿನಗಳ ಪೂರೈಕೆಯ ಅಂಕಿ ಅಂಶಗಳು ಇಂತಿದ್ದು, ಏಪ್ರಿಲ್ 2 ರಂದು  87.78 ಮೆಟ್ರಿಕ್ ಟನ್, ಏಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಏಪ್ರಿಲ್  4ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5 ರಂದು 94.11 ಮೆಟ್ರಿಕ್ ಟನ್, ಏಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ. ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುಳ್ಳು ವದಂತಿಗಳನ್ನು ನಂಬಿ ಆಟೋ ಮಾಲೀಕರು ಮತ್ತು ಚಾಲಕರು ಗ್ಯಾಸ್ ಬಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಆತಂಕಕ್ಕೊಳಗಾಗಬಾರದು ಎಂದು ಇಲಾಖೆ ತಿಳಿಸಿದೆ.

ಯಾವುದೇ ಅಡೆತಡೆಯಿಲ್ಲದೆ ಗ್ಯಾಸ್ ಪೂರೈಕೆಯಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

More articles

Latest article

Most read