ಬೆಂಗಳೂರು : ನಗರದಲ್ಲಿ ಆಟೋ ಚಾಲಕರು ಗ್ಯಾಸ್ ಸಿಗದೇ ಹೈರಾಣಾಗಿದ್ದಾರೆ. ಕಿಲೋ ಮೀಟರ್ ಗಟ್ಟಲೆ ಆಟೋಗಳು ಸಾಲಿನಲ್ಲಿ ನಿಂತಿವೆ. ಚಾಲಕರು ಪರದಾಡುವಂತಾಗಿದೆ.
ಆಟೋ ಚಾಲಕರು ಬೆಳಗ್ಗೆ 4 ಗಂಟೆಯಿಂದಲೇ ಕ್ಯೂ ನಲ್ಲಿ ನಿಂತಿದ್ದಾರೆ. ಸುಮಾರು 2 ಕಿ.ಮೀ ದೂರಗಳಷ್ಟು ಆಟೋ ಸಾಲುಗಟ್ಟಿ ನಿಂತಿವೆ. ಆಟೋ ಚಾಲಕರು ಪರದಾಡುತ್ತಿದ್ದಾರೆ. ಗ್ಯಾಸ್ ಬೆಲೆ ಏರಿಕೆಯೂ ಆಗಿದೆ.
ನಗರದ ಹೆಬ್ಬಾಳದ ಆಟೋ ಗ್ಯಾಸ ಬಂಕ್ನಲ್ಲಿ ಎಲ್ಲಾ ಚಾಲಕರಿಗೂ ಕೇವಲ 400 ರೂಪಾಯಿಗೆ ಗ್ಯಾಸ್ ಹಾಕಲಾಗುತ್ತಿದೆ. ಇನ್ನು ಹಲವು ಬಂಕ್ಗಳಲ್ಲಿ ಗ್ಯಾಸ್ ಇಲ್ಲ ಎಂಬ ಬೋರ್ಡ್ಗಳನ್ನು ಹಾಕಲಾಗಿದೆ.
ನವರಂಗ್ ಬಳಿಯ ಬಂಕ್ಗೂ ಆಟೋದಲ್ಲಿ ಗ್ಯಾಸ್ ಖಾಲಿಯಾಗಿ ಚಾಲಕರು ತಳ್ಳಿಕೊಂಡು ಬಂಕ್ಗಳಿಗೆ ಬರುತ್ತಿದ್ದಾರೆ. ಆದರೂ, ಎಲ್ಪಿಜಿ ಸಿಗುತ್ತಿಲ್ಲ. ಸುತ್ತಮುತ್ತಲಿನ ಬಂಕ್ಗಳಲ್ಲೂ ಗ್ಯಾಸ್ ಸಿಗುತ್ತಿಲ್ಲ ಎಂದು ಚಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾಸ್ ಸಮಸ್ಯೆ ಇಲ್ಲ ಅಂತಾರೆ ಆದರೆ, ಇಲ್ಲಿ ಗ್ಯಾಸ್ ಸಿಗದೇ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಆಟೋ ಚಾಲಕರು ಗರಂ ಆಗಿದ್ದಾರೆ.

