ಆಸ್ಟ್ರಿಯಾದ ಗ್ರಾಜ್ ನಗರದ ಶಾಲೆಯಲ್ಲಿ ಗುಂಡಿನ ದಾಳಿ; ಶಿಕ್ಷಕರು ಮಕ್ಕಳು ಸೇರಿ 8 ಮಂದಿ ಸಾವು

Most read

ನವದೆಹಲಿ: ಆಸ್ಟ್ರಿಯಾ ದೇಶದ ಗ್ರಾಜ್ ನಗರದ ಶಾಲೆಯೊಂದರಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಗುಂಡಿನ ದಾಳಿ ನಡೆಸಿದ ಶಂಕಿತ ಶೂಟರ್ ಇಧೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಎಂದು ಹೇಳಲಾಗಿದೆ. ಈತ ಹಲವು ಬಂದೂಕುಗಳನ್ನು ಬಳಸಿ ಗುಂಡು ಹಾರಿಸಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಈತನ ಕಳೇಬರವು ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿದೆ.

ಇಂದು ಬೆಳಗ್ಗೆ 10 ಗಂಟೆಗೆ ಗುಂಡಿನ ದಾಳಿ ನಡೆದಿದೆ. ನಂತರ ಶಾಲೆಯಲ್ಲಿ ವಿಶೇಷ ಪಡೆಗಳನ್ನು ನಿಯೋಜಿಸಲಾಗಿತ್ತು. ಶಾಲೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿತ್ತು. ದೇಶದ ಎರಡನೇ ಅತಿದೊಡ್ಡ ನಗರವಾದ ಗ್ರಾಜ್‌ ನಗರದಲ್ಲಿ ಸುಮಾರು 3 ಲಕ್ಷ ನಿವಾಸಿಗಳು ವಸಿಸುತ್ತಿದ್ದಾರೆ.

ನಗರದ ಮೇಯರ್‌ ಅವರು ಈ ಘಟನೆಯನ್ನು “ಭಯಾನಕ ದುರಂತ” ಎಂದು ಬಣ್ಣಿಸಿ ಶೋಕ ವ್ಯಕ್ತಪಡಿಸಿದ್ದಾರೆ.

More articles

Latest article