ತಾಯಿ, ಸಹೋದರಿಯರ ಮೇಲೆ ಹಲ್ಲೆ ನಡೆಸಿದ ಪಿಎಸ್‌ ಐ, ಆತನ ಸ್ನೇಹಿತೆ ಸೇರಿ ಮೂವರಿಗೆ ನೋಟಿಸ್

Most read


ಬೆಂಗಳೂರು: ತನ್ನ ಪ್ರೀತಿ ಪ್ರೇಮದ ವಿಚಾರವನ್ನು ಪ್ರಶ್ನಿಸಿದ ತಾಯಿ ಮತ್ತು ಸಹೋದರಿಯರ ಮೇಲೆ ಹಲ್ಲೆ ನಡೆಸಿದ ರಾಮಮೂರ್ತಿ ನಗರದ ಪೊಲೀಸ್‌ ಸಬ್‌ ಇನ್‌ ಸ್ಪೆಕ್ಟರ್‌ ಮಂಜುನಾಥ್‌ ಮತ್ತು ಇತರ ಮೂವರಿಗೆ ಕೆ.ಆರ್.‌ ಪುರಂ ಪಲೀಸ್ ಠಾಣೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಹಲ್ಲೆಗೊಳಗಾದ ತಾಯಿ ಮಂಗಳಮ್ಮ ಅವರ ದೂರು ಮಗನ ವಿರುದ್ಧ ದೂರು ನೀಡಿದ್ದು, ಈ ದೂರನ್ನು ಆಧರಿಸಿ, ಮಂಗಳಮ್ಮ ಪುತ್ರ ಪಿಎಸ್‌ಐ ಮಂಜುನಾಥ್, ಆತನ ಗೆಳತಿ ಜ್ಯೋತಿ ಹಾಗೂ ಬಸವಪ್ರಭು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ
ಸಂಬಂಧಿಸಿದಂತೆ ಮೂರು ದಿನದೊಳಗಾಗಿ ಸಮಜಾಯಿಷಿ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದೊಡ್ಡಬಳ್ಳಾಪುರದ ಮಂಜುನಾಥ್ ಅವರು ಅನಿತಾ ಕುಮಾರಿ ಅವರನ್ನು ಪ್ರೀತಿಸಿ 2011 ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವರ್ಷದ ಹಿಂದೆ ಬೇರೆ ಮಹಿಳೆಯೊಬ್ಬರ ಜತೆ ಮಂಜುನಾಥ್ ಸಲುಗೆ ಬೆಳೆಸಿಕೊಂಡು ಹೆಚ್ಚು ಸಮಯವನ್ನು ಆಕೆಯೊಂದಿಗೆ
ಕಳೆಯುತ್ತಿದ್ದರು. ಈ ಬಗ್ಗೆ ಮಗನಿಗೆ ಬುದ್ದಿ ಹೇಳಿದರೂ ಆ ಮಹಿಳೆಯ ಸಹವಾಸ ಬಿಟ್ಟಿರಲಿಲ್ಲ ಎಂದು ದೂರಿನಲ್ಲಿ ಮಂಗಳಮ್ಮ ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮಂಜುನಾಥ್‌ ಗೆಳತಿ ಜ್ಯೋತಿ ಅವರು ನಮ್ಮ ಮನೆಯ ಬಳಿ ಬಂದು ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳಮ್ಮ ಹಾಗೂ ಅವರ ಪುತ್ರಿಯರಾದ ಮಂಜುಳಾ, ಆಶಾ ವಿರುದ್ಧ ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದರು. ಮಂಗಳಮ್ಮ ಹಾಗೂ ಅವರ ಪುತ್ರಿಯರು ಕೆ.ಆರ್.ಪುರದ ನನ್ನ ಮನೆ ಬಳಿ ಬಂದು ಗಲಾಟೆ ಮಾಡಿ, ಹಲ್ಲೆ ನಡೆಸಿದ್ದಾರೆ. ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article