ಬೆಂಗಳೂರು : ‘ಆಪರೇಷನ್ ಕಮಲ’ ಆತಂಕದ ಹಿನ್ನೆಲೆ ಈಶಾನ್ಯ ರಾಜ್ಯ ಅಸ್ಸಾಂನ 8 ಮಂದಿ ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿಯ ವಂಡರ್ ಲಾ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ.
ಇಂದು ಮಧ್ಯಾಹ್ನದ ಬಳಿಕ ಮತ್ತಷ್ಟು ಶಾಸಕರು ಆಗಮಿಸುವ ಸಾಧ್ಯತೆ ಇದೆ. ಶಾಸಕರನ್ನು ಕರೆತರಲು ಈಗಾಗಲೇ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣಕ್ಕೆ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.
ಒಡಿಶಾ ಕಾಂಗ್ರೆಸ್ ಅಧ್ಯಕ್ಷರೂ ಸೇರಿದಂತೆ ಎಂಟು ಮಂದಿ ಕಾಂಗ್ರೆಸ್ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರೆಸಾರ್ಟ್‌ಗೆ ಆಗಮಿಸಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರೆಸಾರ್ಟ್‌ಗೆ ಆಗಮಿಸಿರುವ ಶಾಸಕರ ವಿವರ: ಪ್ರಫುಲ್ ಚಂದ್ರ ಪ್ರಧಾನ್, ಸತ್ಯಜೀತ್ ಗೋಮಗ, ಡಾ. ಸಿ.ಎಸ್.ರಝೆನ್ ಪಕ್ಕ, ಪವಿತ್ರಾ ಸಾವಂತ್, ಅಶೋಕ್ ಕುಮಾರ್ ದಾಸ್, ನೀಲಮಾದ ಐಕಾಕ, ಅಪ್ಪಲ ಸ್ವಾಮಿ (ಶಾಸಕ), ಮಂಗು ಖಿಲ್ಲ,
ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳು: ಭಕ್ತ ಚದ್ರಾ ದಾಸ್, ದುರ್ಗಾ ಪ್ರಸಾದ್, ಪ್ರದೀಪ್ ಮೊಹಪಾಪೆ

