ಅಸ್ಸಾಂನಲ್ಲಿ ರೂ.45 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ; ನಾಲ್ವರ ಬಂಧನ

ಗುವಾಹಟಿ: ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ರೂ.45 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಹೇಳಿದ್ದಾರೆ.

ಖಚಿತ ಮಾಹಿತಿಯ ಮೇಲೆ ಪೊಲೀಸರು ಎರಡು ಕಡೆಗಳಲ್ಲಿ ದಾಳಿ ನಡೆಸಿದ್ದು, ರೂ. 45 ಕೋಟಿ ಮೌಲ್ಯದ 1.5 ಲಕ್ಷ ನಿಷೇಧಿತ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು  ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ. ಅಸ್ಸಾಂ ಪೊಲೀಸರು ನಮ್ಮ ಯುವಕರ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದ್ದಾರೆ.

ನಿಷೇಧಿತ ಯಾಬಾ ಮಾತ್ರೆಗಳು ಮೆಥಾಂಫೆಟಮೈನ್ ಅಂಶವನ್ನು ಹೊಂದಿದ್ದು, ಥಾಯ್ ಭಾಷೆಯಲ್ಲಿ ಯಾಬಾ ಎಂದರೆ ‘ಹುಚ್ಚು ಔಷಧ’ ಎಂದರ್ಥ. ಈ ಮಾತ್ರೆಗಳನ್ನು ಮಾದಕ ವಸ್ತುಗಳ ನಿಯಂತ್ರಿತ ಕಾಯ್ದೆ ಅಡಿಯಲ್ಲಿ ಭಾರತದಲ್ಲಿ ನಿಷೇಧಿಸಲಾಗಿದೆ.

More articles

Latest article

Most read