ಗುವಾಹಟಿ: ಅಸ್ಸಾಂನ ಕ್ಯಾಚರ್ ಜಿಲ್ಲೆಯಲ್ಲಿ ರೂ. 30 ಕೋಟಿ ಮೌಲ್ಯದ ಯಾಬಾ ಮಾತ್ರೆ (ಡ್ರಗ್ಸ್ ಮಾತ್ರೆ) ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಲಖಿಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 98,000 ಯಾಬಾ ಮಾತ್ರೆಗಳು, ರೂ. 3.5 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಅಸ್ಸಾಂನಲ್ಲಿ ಬೃಹತ್ ಮಾದಕ ವಸ್ತು ಪತ್ತೆಯಾಗಿದೆ. ರೂ. 30 ಕೋಟಿ ಮೌಲ್ಯದ 98,000 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಖಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಕ್ಮಾರಾದ ಚಂದ್ರಾಪುರ ಭಾಗ II ರಲ್ಲಿ ಕ್ಯಾಚರ್ ಪೊಲೀಸರು ಕಾರ್ಯಾಚರಣೆ ನಡೆಸಿದರು. ಈ ವೇಳೆ 98,000 ಯಾಬಾ ಮಾತ್ರೆಗಳು ಮತ್ತು ರೂ. 3.5 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಯಾಬಾ ಎಂಬುದು ಮೆಟಾಂಫೆಟಮೈನ್ ಮತ್ತು ಕೆಫೇನ್‌ನ ಮಿಶ್ರಣ ಹೊಂದಿದ್ದು, ಉತ್ತೇಜಕ ಮತ್ತು ವ್ಯಸನಕಾರಿ ಮಾತ್ರೆಯಾಗಿದೆ. ಇದನ್ನು ದೇಶದಲ್ಲಿ ನಿಷೇಧಿಸಲಾಗಿದೆ.