ಜೆಡಿಎಸ್ ಕಾರ್ಯಕರ್ತನೋರ್ವನನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವ ಸೂರಜ್ ರೇವಣ್ಣ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಗುವ ಸಂಭವವಿದೆ.
ಹೊಳೆನರಸೀಪುರ: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಮತ್ತೊಬ್ಬ ಸಂತ್ರಸ್ತ ದೂರು ನೀಡಲು ನಗರ ಠಾಣೆಗೆ ಆಗಮಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಸರ್ಕಾರ ಈಗಾಗಲೇ ಮೊದಲ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿರುವುದರಿಂದ ಇಂದು ಮತ್ತೊಂದು ದೂರು ದಾಖಲಾದರೆ ಅದರ ತನಿಖೆಯನ್ನೂ ಸಿಐಡಿ ನಡೆಸಲಿದೆ.
ಹೊಳೆನರಸೀಪುರದ ತೋಟದ ಮನೆಯೊಂದರಲ್ಲಿ ಸೂರಜ್ ರೇವಣ್ಣ ಹಲವು ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಾಧ್ಯತೆ ಇದ್ದು, ಈಗ ಎರಡನೇ ಪ್ರಕರಣ ದಾಖಲಾಗುವ ಸಂಭವವಿದೆ.