ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಹೆಣ್ಣುಮಗಳ ಹತ್ಯೆ: ಆರೋಪಿ ಹೆಸರು ಗಿರೀಶ್‌ ಸಾವಂತ್‌

ಹುಬ್ಬಳ್ಳಿ: ನೇಹಾ ಹಿರೇಮಠ್‌ ಎಂಬ ಯುವತಿಯನ್ನು ಕಾಲೇಜು ಕ್ಯಾಂಪಸ್‌ ಆವರಣದಲ್ಲೇ ಚುಚ್ಚಿ ಕೊಂದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಯುವತಿಯ ದಾರುಣ ಕೊಲೆಯಾಗಿದೆ.

ಪ್ರೇಮ ನಿರಾಕರಣೆಯ ಕಾರಣಕ್ಕೆ ತಾನು ಪ್ರೀತಿಸಿದ್ದ ಯುವತಿಯನ್ನೇ ಗಿರೀಶ್‌ ಸಾವಂತ್‌ ಎಂಬ ಕ್ರೂರಿ ಚಾಕುವಿನಿಂದ ಇರಿದು ಕೊಂದುಹಾಕಿದ್ದಾನೆ.

ವೀರಾಪುರ ಓಣಿಯಲ್ಲಿ ವಾಸಿಸುತ್ತಿದ್ದ ಅಂಜಲಿ ಅಂಬಿಗೇರ ಕೊಲೆಯಾದ ದುರ್ದೈವಿ. ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕೆ ಹಂತಕ ಆಕೆಯ ಮನೆಗೇ ನುಗ್ಗಿ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಂದುಹಾಕಿದ್ದಾನೆ.

ಕೊಲೆ ಆರೋಪಿ ಗಿರೀಶ್‌ ಸಾವಂತ್‌ ನನ್ನು ಬೆಂಡಿಗೇರಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಹಾ ಪ್ರಕರಣದ ನೆನಪು ಮಾಸುವ ಮುನ್ನವೇ ಮತ್ತೋರ್ವ ಯುವತಿಯ ಕಗ್ಗೊಲೆಯಾಗಿರುವುದರಿಂದ ವಾಣಿಜ್ಯ ನಗರಿ ಹುಬ್ಬಳ್ಳಿ ಬೆಚ್ಚಿ ಬಿದ್ದಿದೆ.

More articles

Latest article

Most read