Wednesday, December 11, 2024

ಭಾರತದ ಪೌರತ್ವ ಪಡೆದ ಬಳಿಕ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್ ಕುಮಾರ್..!

Most read

ದೇಶದೆಲ್ಲೆಡೆ ಲೋಕಸಭಾ ಚುನಾವಣೆಯ ರಂಗು ಜೋರಾಗಿದೆ. ಇಂದು ಕೂಡ ಮತದಾನ ನಡೆಯುತ್ತಿದ್ದು, ಐದನೇ ಹಂತದ ಮತದಾನ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಬೆಳಗ್ಗೆ ಏಳು ಗಂಟೆಗೇನೆ ಜನ ಮತ ಹಾಕುವುದಕ್ಕೆ ಮತಗಟ್ಟೆಗಳಲ್ಲಿ ಸಾಲು ಕಟ್ಟಿ ನಿಂತಿದ್ದಾರೆ. ಮಳೆಗಾಲವಾಗಿರುವ ಕಾರಣ, ಬೇಗ ಬೇಗ ಮತ ಚಲಾಯಿಸುವುದಕ್ಕೆ ಸಜ್ಜಾಗಿದ್ದಾರೆ. ಇಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸಹ ಮತ ಚಲಾಯಿಸಿದ್ದಾರೆ. ಆದರೆ ಭಾರತದ ಪೌರತ್ವವನ್ನು ಪಡೆದ ಬಳಿಕ ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.

ಅಕ್ಷಯ್ ಕುಮಾರ್ 1990ರಲ್ಲಿ ಕೆನಡಾದ ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ನಂತರ 2019ರಲ್ಲಿ ಮತ್ತೆ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಕೆ ಮಾಡಿದರು‌. ಇಲ್ಲಿನ ನಾಗರೀಕತ್ವವನ್ನು ಪಡೆದುಕೊಂಡರು. ಅಂದು ಪೌರತ್ವ ಪಡೆದುಕೊಂಡ ಬಳಿಕ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ.

ಮತದಾನದ ಬಳಿಕ ಮಾತನಾಡಿದ ಅಕ್ಷಯ್ ಕುಮಾರ್, ನನ್ನ ಭಾರತ ವಿಕಸಿತ ಮತ್ತು ಅಭಿವೃದ್ಧಿಯತ್ತ ಸಾಗುತ್ತಿರಬೇಕು. ಇದೇ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಾನು ಇವತ್ತು ಮತ ಚಲಾಯಿಸಿದ್ದೇನೆ. ಭಾರತದ ಜನರು ತಮ್ಮ ಸ್ವವಿವೇಚನೆಯಿಂದ ಆಲೋಚಿಸಿ ಮತ ಹಾಕಬೇಕು. ಈ ಬಾರಿ ಹೆಚ್ಚು ಮತದಾನ ಆಗಲಿದೆ. ಇಂದು ಏಳು ಗಂಟೆಗೇನೆ ಅಪಾರ ಸಂಖ್ಯೆಯಲ್ಲಿ ಜನ ಮತಗಟ್ಟೆಗೆ ಬಂದಿದ್ದರು. ಈಗಲೂ 200-300 ಜನ ಮತಗಟ್ಟೆಯಲ್ಲಿ ನಿಂತಿದ್ದಾರೆ. ಭಾರತವೇ ನನಗೆ ಸರ್ವಸ್ವ. ನನ್ನ ಹೃದಯ ಮತ್ತು ಪೌರತ್ವ ಎಲ್ಲವೂ ಹಿಂದೂಸ್ತಾನವೇ ಆಗಿದೆ. ನಾನು ಗಳಿಸಿದ್ದು ಎಲ್ಲವೂ ಇಲ್ಲಿಂದಾನೇ. ಮತ್ತೆ ಭಾರತದ ಪೌರತ್ವ ಹಿಂಪಡೆಯುತ್ತಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ.

More articles

Latest article