ಬಾಲಿವುಡ್ ನಲ್ಲಂತೂ ಬಯೋಪಿಕ್ ಸಿನಿಮಾಗಳು ಬರ್ತಾನೆ ಇರ್ತಾವೆ. ಇದೀಗ ಕ್ರಿಕೆಟಿಗ ಪಾಲ್ವಾಂಕರ್ ಬಾಲೂ ಜೀವನಗಾಥೆಯನ್ನು ಸಿನಿಮಾ ಮಾಡಲು ಹೊರಟಿದ್ದಾರೆ. ಈ ಸಿನಜಮಾದಲ್ಲಿ ಅಜಯ್ ದೇವಗನ್, ಪಾಲ್ವಂಕರ್ ಬಾಲು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೆಗಷ್ಟೇ ಅಜಯ್ ದೇವಗನ್ ಅವರ ಮೈದಾನ್ ಸಿನಿಮಾ ತೆರೆಗೆ ಬಂದು ಸಾಕಷ್ಟು ಸದ್ದು ಮಾಡಿದೆ. ಇದರ ಬೆನ್ನಲ್ಲೇ ಅಜಯ್ ದೇವಗನ್ ನಟಿಸುವ ಕ್ರಿಕೆಟಿಗರ ಬಯೋಪಿಕ್ ಕೂಡ ಸುದ್ದಿಯಾಗಿದೆ.
ಅಜಯ್ ದೇವಗನ್ ಅವರ ನಟನೆಯ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ. ಹೀಗಾಗಿ ಪಾಲ್ವಾಂಕರ್ ಪಾತ್ರಕ್ಕೂ ನ್ಯಾಯ ಕೊಡಲಿದ್ದಾರೆ ಎಂದೇ ನಂಬಿದ್ದಾರೆ. ಪಾಲ್ವಾಂಕರ್ ದಲಿತ ಸಮುದಾಯದ ಮೊದಲ ಕ್ರಿಕೆಟಿಗ. ನುರ್ಮಾಪಕಿ ಪ್ರೀತಿ ಸಿನ್ಹಾ ಅವರು ಈ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ತಿಗ್ ಮಂಶು ದುಲಿಯಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಾಮಚಂದ್ರ ಗುಹಾ ಬರೆದ ಎ ಕಾರ್ನರ್ ಎ ಫಾರೆನ್ ಫೀಲ್ಡ್ ಪುಸ್ತಕ ಆಧರಿಸಿ ಸಿನಿಮಾದ ಕಥೆ ಸಿದ್ಧವಾಗಿದೆ. ನಾಯಕನಾಗಿ ಅಜಯ್ ದೇವಗನ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕಿ ಪ್ರೀತಿ ಸಿನ್ಹಾ ಹಾಕಿಕೊಂಡಿದ್ದರು.
ಸಿನಿಮಾದ ಶೂಟಿಂಗ್ ಈ ವರ್ಷದ ಕೊನೆಯಲ್ಲಿ ಶುರುವಾಗಲಿದೆ. ದಲಿತ ಸಮುದಾಯದಲ್ಲಿ ಜನಿಸಿದ ಪಾಲ್ವಾಂಕರ್ ಬಾಲೂ ಅವರು ಪುಣೆ ಕ್ರಿಕೆಟ್ ಕ್ಲಬ್ ನಲ್ಲಿ ಆರಂಭದಲ್ಲಿ ಗ್ರೌಂಡ್ ಕೀಪರ್ ಆಗಿದ್ದರು. ನಂತರ ಅವರು ಕ್ರಿಕೆಟರ್ ಆದರು. ಈ ಪ್ರಯಾಣದಲ್ಲಿ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಹೀಗಾಗಿ ಅವರ ಜೀವನಾಗಾಥೆಯನ್ನೇ ಸಿನಿಮಾ ಮಾಡಲು ಹೊರಟಿದ್ದಾರೆ.