ಕಾನ್ ಫೆಸ್ಟಿವಲ್‌ನಲ್ಲಿ ಕಾಣಿಸಿಕೊಂಡ ಐಶ್ವರ್ಯಾ ರೈ: ರಾಖಿ ಸಾವಂತ್‌ಳನ್ನು ಮಧ್ಯ ತಂದ ಟ್ರೋಲರ್ಸ್..!

ಐಶ್ವರ್ಯಾ ರೈ ಕಾನ್ ಫೆಸ್ಟಿವಲ್‌ (Cannes Film Festival) ನಲ್ಲಿ ಪ್ರತಿ ವರ್ಷ ಕೂಡ ಗಮನ ಸೆಳೆಯುತ್ತಾರೆ. ವಿಭಿನ್ನವಾದ ಡ್ರೆಸ್‌ಗಳನ್ನು ತೊಟ್ಟು, ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಾ, ಎಲ್ಲರ ಕಣ್ಮನ ಸೆಳೆಯುತ್ತಾರೆ‌. ಈ ಬಾರಿಯ ಕಾನ್ ಫೆಸ್ಟಿವಲ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಆದರೆ ಮುಖದ ಬದಲಾವಣೆಗಾಗಿ ಈ ಬಾರಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.

ಐಶ್ವರ್ಯಾ ರೈ (Aishwarya Rai) ಒಂದು ಕಾಲದಲ್ಲಿ ಕೋಟ್ಯಾಂತರ ಹೃದಯಗಳನ್ನು ಗೆದ್ದ ಚೆಲುವೆ. ಈ ಬಾರಿಯ ಕಾನ್ ಫೆಸ್ಟಿವಲ್ ನಲ್ಲಿ ಕಪ್ಪು, ಬಿಳಿ ಮತ್ತು ಗೋಲ್ಡನ್ ಬಣ್ಣದಲ್ಲಿ ಸಿಂಗಾರಗೊಂಡ ಗೌನ್ ಧರಿಸಿ ಮಾರ್ಜಲ ನಡಿಗೆಯಲ್ಲಿ ನಡೆದಿದ್ದಾರೆ. ರೆಡ್ ಕಾರ್ಪೆಟ್ ನಲ್ಲಿ ನಡೆದಾಗ ಎಲ್ಲರೂ ಖುಷಿ ಪಟ್ಟಿದ್ದರು. ಆದರೆ ಅವರ ಫೋಟೋಗಳು ಈಗ ಟ್ರೋಲಿಗರ ಕೈಗೆ ಸಿಕ್ಕಿವೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿವೆ.

ಈ ಸಲದ ಕಾನ್ ಫೆಸ್ಟಿವಲ್ ನಲ್ಲಿ ಮಗಳು ಆರಾಧ್ಯ ಕೂಡ ಬಂದಿದ್ದರು. ಅಮ್ಮನ ಕ್ಯಾಟ್ ವಾಕ್ ಗೆ ಸಹಾಯ ಕೂಡ ಮಾಡಿದ್ದರು. ಅಮ್ಮ ಮಗಳು ಇರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿರುವ ನೆಟ್ಟಿಗರು, ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಇದು ನಿಜಕ್ಕೂ ಐಶ್ವರ್ಯಾ ರೈ ಅವರೇನಾ ಅಥವಾ ರಾಕಿ ಸಾವಂತ್ ಅವರಾ. ಐಶ್ವರ್ಯಾ ರೈ ರಾಖಿ ಸಾವಂತ್ ರೀತಿಯೇ ಕಾಣುತ್ತಿದ್ದಾರೆ ಎಂದು ಹಲವರು ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.

ಐಶ್ವರ್ಯಾ ಅವರ ಅಂದದ ವಿಚಾರಕ್ಕೆ ಕೆಲವೊಮ್ಮೆ ಟ್ರೋಲ್ ಆಗುವುದು ಸಹಜ. ಐಶ್ವರ್ಯಾ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದೆಲ್ಲಾ ಈಗಾಗಲೇ ಟ್ರೋಲ್ ಆಗಿದೆ. ಮಗಳಿಗೆ ಈಗಲೇ ಸರ್ಜರಿ‌ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈಗ ಮತ್ತೊಮ್ಮೆ ಅವರ ಬ್ಯೂಟಿ ಬಗ್ಗೆ ಟ್ರೋಲ್ ಆಗಿದೆ.

More articles

Latest article

Most read