ತಂಜಾವೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ವಿವಾಹ ಸಹಾಯ ಯೋಜನೆಯಡಿಯಲ್ಲಿ ನವ ವಿವಾಹಿತರಿಗೆ ರೇಷ್ಮೆ ಸೀರೆ ಮತ್ತು ಬಂಗಾರವನ್ನು ನೀಡಲಾಗುವುದು ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಭರವಸೆ ನೀಡಿದ್ದಾರೆ.
ತಂಜಾವೂರಿನಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ರೇಷ್ಮೆ ಉಡುಪುಗಳ ನೇಕಾರರೊಂದಿಗೆ ಸಂವಾದ ನಡೆಸಿದ ಅವರು ನೇಕಾರರ ಜೀವನೋಪಾಯವನ್ನು ಸುಧಾರಿಸುವ ದೃಷ್ಟಿಯಿಂದ ಈ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ರೇಷ್ಮೆ ಕೈಮಗ್ಗ ನೇಕಾರರನ್ನು ಬೆಂಬಲಿಸಲು ನಾಪಕ್ಷ ಶಕ್ತಿ ಮೀರಿ ಪ್ರಯತ್ನಿಸಲಿದೆ. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಪ್ರಾರಂಭಿಸಿದ ವಿವಾಹ ಸಹಾಯ ಯೋಜನೆಯಡಿಯಲ್ಲಿ ನವವಿವಾಹಿತ ವಧುಗಳಿಗೆ ಮಂಗಳಸೂತ್ರಕ್ಕಾಗಿ ಚಿನ್ನ ಮತ್ತು ರೇಷ್ಮೆ ಸೀರೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಜೆಪಿ, ಎಐಎಡಿಎಂಕೆಯನ್ನು ನುಂಗಲಿದೆ ಎಂಬ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಪಳನಿಸ್ವಾಮಿಯನ್ನು ನುಂಗುತ್ತದೆ ಎಂದು ಸ್ಟಾಲಿನ್ ಹೇಳು ನುಂಗಲು ನಾನು ಹುಳುವೇ? ನಿಮ್ಮ ಮಿತ್ರಪಕ್ಷಗಳನ್ನು ನೀವೇ ನುಂಗುತ್ತಿದ್ದೀರಿ ಎಂದು ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಡಿಮೆಯಾಗುತ್ತಿದೆ. ಕಮ್ಯುನಿಸ್ಟ್ ಪಕ್ಷ ಕಣ್ಮರೆಯಾಗುತ್ತಿದೆ. ಮತ್ತೊಂದು ಮಿತ್ರಪಕ್ಷವಾದ ವಿಸಿಕೆ ಡಿಎಂಕೆಗೆ ಅಂಟಿಕೊಂಡಿದೆ ಎಂದು ಕಟಕಿಯಾಡಿದ್ದಾರೆ.