ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಅಫ್ಸರ್ ಕೊಡ್ಲಿಪೇಟೆ ಆಗ್ರಹ

Most read

ಸೋಮವಾರಪೇಟೆ: ಕೊಡಗು ಜಿಲ್ಲೆ ಕೊಡ್ಲಿಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಿ ಆಸ್ಪತ್ರೆಗೆ ಈಗಿರುವ ವ್ಯೆದ್ಯರೊಂದಿಗೆ ಇನ್ನೋರ್ವ ವ್ಯೆದ್ಯರನ್ನು ನೇಮಿಸಿ ಶಾಶ್ವತವಾಗಿ ಅಂಬುಲೆನ್ಸ್ ಮಂಜೂರು ಮಾಡಲು SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ ಮಂಥರ್ ಗೌಡ, ಸಂಸದ ಯದುವೀರ್ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಅವರುಗಳನ್ನು ಟ್ಯಾಗ್ ಮಾಡಿ, ಕೊಡ್ಲಿಪೇಟೆಯ ಜನತೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿದ್ದಾರೆ.

ಕೊಡ್ಲಿಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆಯ ಕುರಿತು ನಿನ್ನೆ ನಡೆದ ಘಟನೆಯೊಂದನ್ನು ಅವರು ವಿವರಿಸಿದ್ದಾರೆ.

ನಿನ್ನೆ ಬಸ್ಸು ಮತ್ತು ಕಾರ್ ನಡುವೆ ಅಪಘಾತವಾದ ಸಮೀಪದ ನಿವಾಸಿ ಸ್ನೇಹಿತರಾದ ಉಮೇಶ್ ಗೌಡ ತನ್ನ ಓಮಿನಿ ಕಾರಿನಲ್ಲಿ 6 ಜನರನ್ನು ಅಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಡಿ ಗ್ರೂಪ್ ನವರು ಬಿಟ್ಟರೆ ಯಾರೂ ಇರಲಿಲ್ಲ.

ರಾತ್ರಿಪಾಳಿಯ ಕಾರ್ಯ ನಿರ್ವಹಿಸಿ ಆಗ ತಾನೆ ತನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲು ತೆರಳಿದ್ದ ನಂದಿನಿ ಎಂಬ ಶುಶ್ರೂಶಕಿ ವಾಪಾಸ್ ಬಂದು ಪ್ರಥಮ ಚಿಕಿತ್ಸೆ ನೀಡಿದರು. ಅವರೂ ಬರದೇ ಇದ್ದಿದ್ದರೆ, ಪ್ರಾಥಮಿಕ ಚಿಕಿತ್ಸೆ‌ ಇಲ್ಲದೆ ಎರಡು ಜೀವಗಳು ಬಲಿಯಾಗುತ್ತಿದ್ದವು ಎಂದು ಅವರು ವಿವರಿಸಿದ್ದಾರೆ.

More articles

Latest article