ಏರೋಸ್ಪೇಸ್ ಪಾರ್ಕ್ ರಾಜ್ಯದಲ್ಲೇ ಸ್ಥಾಪನೆಯಾಗಲಿದೆ: ಗೃಹ ಸಚಿವ ಜಿ.ಪರಮೇಶ್ವರ

ಬೆಂಗಳೂರು: ಏರೋಸ್ಪೇಸ್ ಪಾರ್ಕ್ ಆಂಧ್ರಪ್ರದೇಶಕ್ಕೆ ಸ್ಥಳಾಂತರವಾಗಲು ಕರ್ನಾಟಕ ಸರ್ಕಾರ ಬಿಡುವುದಿಲ್ಲ. ಬದಲಾಗಿ ಉದ್ದಿಮೆದಾರರನ್ನು ರಾಜ್ಯದಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದಾರೆ.

ದೇವನಹಳ್ಳಿ ಸಮೀಪ ಭೂಮಿ ನೀಡಲು ಸಾಧ್ಯವಾಗದಿದ್ದರೆ, ಬೇರೊಂದು ಕಡೆ ಭೂಮಿಯನ್ನು ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ. ಹೂಡಿಕೆದಾರರನ್ನು ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಗೆ ಹೋಗಲು ಬಿಡುವುದಿಲ್ಲ. ರಾಜ್ಯದಲ್ಲೇ  ಹೂಡಿಕೆ ಮಾಡುವಂತೆ ಅವರನ್ನು ಮನವೊಲಿಸುತ್ತೇವೆ ಎಂದರು.

ಏರೋಸ್ಪೇಸ್ ಪಾರ್ಕ್‌ ಗಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಮಾಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದ ನಂತರ, ನಾರಾ ಲೋಕೇಶ್ ಅವರು ಏರೋಸ್ಪೇಸ್ ಉದ್ಯಮವನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಎಕ್ಸ್‌ ಮೂಲಕ ಮನವಿ ಮಾಡಿದ್ದರು.

More articles

Latest article

Most read