Saturday, May 18, 2024

ಅಧಿಕಾರಕ್ಕಾಗಿ ಇಬ್ಬರು ಸ್ವಾಮೀಜಿಗಳಿಂದ ನನ್ನ ಮೇಲೆ ಕೊಲೆ ಸಂಚು : ಆದಿಚುಂಚನಗಿರಿ ಶಾಖಾಮಠದ ಸ್ವಾಮೀಜಿ ಆರೋಪ

Most read

ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಆದಿಚುಂಚನಗಿರಿ ಮಠ ಗದ್ದುಗೆ ಗುದ್ದಾಟ ಶುರುವಾಗಿದೆ. ಹೌದು, ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದ ಆದಿಚುಂಚನಗಿರಿ ಶಾಖಾ ಮಠದ ವಿದ್ಯಾಧರ ನಾಥ ಶ್ರೀಗಳು ಇಬ್ಬರು ಸ್ವಾಮಿಗಳ ವಿರುದ್ಧ ಗಂಭೀರ ಆರೋಪ ಮಾಡ್ತಿದ್ದಾರೆ. ಮಠದ ಅಧಿಕಾರಕ್ಕಾಗಿ ನನ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಶೇರ್ ಮಾಡಿರುವ ವಿದ್ಯಾಧರ ನಾಥ ಶ್ರೀಗಳು, ಕುಂಬಳಗೂಡು ಪ್ರಕಾಶನಾಥ ಸ್ವಾಮೀಜಿ ಹಾಗೂ ಶಿವಮೊಗ್ಗ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ‌ ಮೇಲೆ ಆರೋಪಿಸಿದ್ದಾರೆ. ನಮ್ಮ ಅವರ ಮಧ್ಯೆ ಏನೂ ದ್ವೇಷವಿಲ್ಲ. ಆದರೆ ಅಧಿಕಾರಕ್ಕಾಗಿ ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿಸಿದ್ದಾರೆ.

ಇನ್ನು ಈ ವಿಚಾರ ನಿರ್ಮಲಾನಂದನಾಥ ಶ್ರೀಗಳಿಗೆ  ಹಾಗೂ ಹೆಚ್ ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್, ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರಿಗೆ ತಿಳಿದಿದೆ. ಆದರೆ ಒತ್ತಡದಿಂದಾಗಿ ಶ್ರೀಗಳು ಕೂಡ ಸುಮ್ಮನಾಗಿದ್ದಾರೆ. ನನಗೆ ಜೀವಭಯವಿದ್ದು ಸಾಯಿಸೋಕೆ ಯಾವೆಲ್ಲ ಮೆತೆಡ್ ಯೂಸ್ ಮಾಡ್ಬೇಕು ಅದೆಲ್ಲ ಮಾಡ್ತಿದ್ದಾರೆ . ಬಹಳ ವರ್ಷಗಳಿಂದ ಸಾಯಿಸಲಿಕ್ಕೆ ಅದನ್ನೆಲ್ಲ ಮಾಡ್ತಿದ್ದಾರೆ . ನೀರು ಕಾಫೀ ಟೀ ಊಟದಲ್ಲಿ ಮಿಕ್ಸ್ ಮಾಡುವ ಎಕ್ಸ್’ಪರ್ಟ್ ಗ್ಯಾಂಗ್ ಇದಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಗೃಹಸಚಿವ ಜ್ಞಾನೇಂದ್ರ, ಸಿಎಂ ಆಗಿದ್ದ ಬೊಮ್ಮಾಯಿ ಅವರನ್ನ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೆ ಆದರೆ ಪ್ರಯೋಜನ ಆಗಿಲ್ಲ.  ರಿವಾಲ್ವರ್’ನ್ನು ಕೊಡದೇ ಅವಾಯ್ಡ್ ಮಾಡಿದ್ದಾರೆ ಎಂದು ದೂರಿದ್ದಾರೆ.

ನಮ್ಮ ಮಠಕ್ಕೆ ಒಬ್ಬರನ್ನು ಕೆಲಸಕ್ಕೆ ಬರಲಿಕ್ಕೆ ಬಿಡ್ತಿಲ್ಲ  . ಒಬ್ಬನೇ ಏನು ಮಾಡ್ತಾನೋ ನೋಡೋಣ ಅಂದ್ಕೊಂಡಿದಾರೆ. ಹೆಸರುಘಟ್ಟ ಮಠದ ಸಿಬ್ಬಂದಿ ಎಲ್ಲರಿಗೂ ಸತ್ಯ ಗೊತ್ತು ಆದರೆ ಅವರು ಯಾರು ಬಾಯಿ ಬಿಡಲ್ಲ. ಒಂದಲ್ಲ ಒಂದು ದಿನ ಸತ್ಯ ಗೊತ್ತಾಗೇ ಗೊತ್ತಾಗತ್ತೆ. ನಾವು ಹೊರಗೆ ಹೋಗ್ತಿದ್ದಾಗೆ ಸಂಪ್’ಗೆ ಹಾವು ಬಿಡ್ತಾರೆ. ನಮ್ಮ ನಾಯಿಗಳನ್ನ ಸಾಯಿಸಲಿಕ್ಕೆ ಬಹಳಷ್ಟು ಸಲ ಹೊಂಚು ಹಾಕಿದ್ದಾರೆ. ಹೋಗುವ ದಾರಿಯಲ್ಲಿ ಕಾರುಗಳಿಗೆ ಮೊಳೆ ಇಡಿಸ್ತಿದ್ದಾರೆ ಎಂದು ದೂರಿದ್ದಾರೆ.

ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಹಲವಾರು ಪ್ರಕರಣಗಳು ದಾಖಲಾಗಿವೆ. 

More articles

Latest article