ಖ್ಯಾತ ನಟಿ ಕಾರು ಅಪಘಾತ; ಓರ್ವ ಕಾರ್ಮಿಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Most read

ಮುಂಬೈ: ಮುಂಬೈನ  ಕಂಡಿವಲಿಯಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಖ್ಯಾತ ಮರಾಠಿ ನಟಿ ಉರ್ಮಿಳಾ ಕೊಠಾರೆ ಅವರ ಕಾರು ಹರಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೊಬ್ಬ ಕಾರ್ಮಿಕನ ಸ್ಥಿತಿ ಸ್ಥಿತಿ ಗಂಭೀರವಾಗಿದೆ.

ನಟಿ ಉರ್ಮಿಳಾ ಕೊಠಾರೆ ಚಿತ್ರೀಕರಣ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮೆಟ್ರೋ ರೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ನಟಿಯ ಕಾರು ಡಿಕ್ಕಿ ಹೊಡೆದಿದೆ. ನಟಿಯ ಕಾರು ಅತಿವೇಗದಲ್ಲಿದ್ದು, ಚಾಲಕನ ನಿಯಂತ್ರಣ ತಪ್ಪಿ ಈ ದರಂತ ಸಂಭವಿಸಿದೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ನಟಿ ಉರ್ಮಿಳಾ ಹಾಗೂ ಚಾಲಕ ಅವರೂ ಗಾಯಗೊಂಡಿದ್ದಾರೆ.

ಸದ್ಯ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿಗೂ ಭಾರೀ ಹಾನಿಯಾಗಿದೆ. ಉರ್ಮಿಳಾ ಕೊಠಾರೆ ಅವರು ಮರಾಠಿಯ ದುನಿಯಾದಾರಿ, ಹಿಂದಿಯ ಥ್ಯಾಂಕ್ ಗಾಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

More articles

Latest article