ಅಪಘಾತ; ಸಹೋದರಿಯರ ದುರ್ಮರಣ

Most read

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸ ಸಾಗಣೆ ಲಾರಿ ಹರಿದು ಸಹೋದರಿಯರು ಮೃತಪಟ್ಟಿರುವ ಪ್ರಕರಣ ಬೆಂಗಳೂರಿನ ಥಣಿಸಂದ್ರ ಮುಖ್ಯ ರಸ್ತೆಯ ಸಾರಾಯಿಪಾಳ್ಯ ಬಳಿ ನಡೆದಿದೆ. ಗೋವಿಂದಪುರದ ನಾಜಿಯಾ ಸುಲ್ತಾನ (30), ನಾಜಿಯಾ ಇರ್ಫಾನ (32) ಮೃತ ಸಹೋದರಿಯರು. ಲಾರಿ ಚಾಲಕ ಗಡಿಲಿಂಗನನ್ನು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ಮಧ್ಯಾಹ್ನ ಥಣಿಸಂದ್ರ ಮುಖ್ಯ ರಸ್ತೆಯ ಸಾರಾಯಿಪಾಳ್ಯದ ಸಮೀಪ ಬಿಬಿಎಂಪಿ ಕಸದ ಲಾರಿ ತೆರಳುತ್ತಿತ್ತು. ಈ ವೇಳೆ ಬೈಕ್​ನಲ್ಲಿ ಬರುತ್ತಿದ್ದ ಸಹೋದರಿಯರು ಕಸದ ಲಾರಿಯನ್ನು ಎಡಗಡೆಯಿಂದ ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ. ಇದೇ ವೇಳೆ, ಎದುರಿಗೆ ಬೈಕ್​ ವೊಂದು ಬಂದಿದೆ. ಬೈಕ್​ನಿಂದ ತಪ್ಪಿಸಿಕೊಳ್ಳಲು ಇವರು ತಮ್ಮ ವಾಹನವನ್ನು ಬಲಕ್ಕೆ ತಿರುಗಿಸಿದ್ದಾರೆ. ಆಗ ಪಕ್ಕದಲ್ಲಿದ್ದ ಲಾರಿಗೆ ಡಿಕ್ಕಿ ಹೊಡೆದು ಲಾರಿ ಕೆಳಗೆ ಬಿದ್ದಿದ್ದಾರೆ. ಇಬ್ಬರೂ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹೆಣ್ಣೂರು ಸಂಚಾರಿ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಹೆಬ್ಬಾಳ ಮೇಲ್ಸೇತುವೆ ಮೇಲಿನ ಡಿವೈಡರ್​ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈತ ವೇಗವಾಗಿ ಬರುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article