ಕೋಲಾರ : ಇಂದು ಬೆಳಗ್ಗೆ ಮುಂಜಾನೆಯ ನಸುಕಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪವನ್ ಕಾಲೇಜು ಸಮೀಪ ತಿರುಪತಿಯಿಂದ ಬೆಂಗಳೂರಿನತ್ತ ಹೊರಟಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಬಸ್ಸು ಪಕ್ಕದ ರಸ್ತೆಗೆ ಉರುಳಿ ಬಿದ್ದಿದೆ.
ಸುಮಾರು 4 ಗಂಟೆ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು ಬಸ್ಸಿನಲ್ಲಿ ಸುಮಾರು ಇಪ್ಪತ್ತೈದು ಮಂದಿ ಪ್ರಯಾಣಿಕರು ಇದ್ದರೆಂದೂ ಚಾಲಕನೂ ಸೇರಿದಂತೆ ಇಬ್ಬರಿಗೆ ಗಂಭೀರ ಸಮೀಪದ ಗಾಯಗಳಾಗಿದ್ದು ಉಳಿದಂತೆ ಸುಮಾರು ಹತ್ತು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಘಟನೆ ಸಂಭವಿಸಿ ಸುಮಾರು ಅರ್ಧ ತಾಸು ಕಳೆದರೂ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ವಾಹನ ಬಾರದ ಪರಿಣಾಮ ಹೆದ್ಧಾರಿ ರಸ್ತೆಯ 112 ವಾಹನದಲ್ಲಿ ಚಾಲಕ ಅನಿಲ್ ಹಾಗೂ ನಗರ ಠಾಣೆ ಸಿಬ್ಬಂಧಿ ಮಂಜುನಾಥ ರೆಡ್ಡಿ ತಮ್ಮ ಸಮಯ ಪ್ರಜ್ಞೆಯಿಂದ ಜೀಪಿನಲ್ಲಿಯೇ ಗಾಯಾಳುಗಳನ್ನು ಸಮೀಪದ ಜಾಲಪ್ಪ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.
ಹೆಸರಿಲ್ಲದ ಎಂ ಹೆಚ್ 14 ಸಿ ಹೆಚ್ 4218 ನಂಬರಿನ ಖಾಸಗಿ ವಾಹನ ಇದಾಗಿದ್ದು ಸಂಚಾರಿ ಪೋಲೀಸರು ಪ್ರಕಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

