ವಿಷ್ಣುವರ್ಧನ್‌ ಸ್ಮಾರಕವಿದ್ದ ಅಭಿಮಾನ್‌ ಸ್ಟುಡಿಯೋ ಭೂಮಿ ಒಪ್ಪಂದ ರದ್ದು; ಅರಣ್ಯ ಇಲಾಖೆಗೆ ಮರಳಿಸಲು ಸೂಚನೆ

Most read

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂುಕು ಕೆಂಗರು ಹೋಬಳಿ, ಮೈಲಸಂದ ಗ್ರಾಮದ ಸರ್ವೆ ನಂ.26ರಲ್ಲಿ ಅಭಿಮಾನ್ ಸ್ಟುಡಿಯೋಗೆ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದುಪಡಿಸಿ ಹಿಂಪಡೆಯುವಂತೆ ಅರಣ್ಯ ಇಲಾಖೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎನ್.‌ ರವೀಂದ್ರ ಕುಮಾರ್‌ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ಎನ್.‌ ಜಗದೀಶ ಅವರಿಗೆ ವಿವರವಾದ ಪತ್ರ ಬರೆದು ಭೂಮಿಯನ್ನು ಹಿಂಪಡೆಯಲು ಆದೇಶಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದಲ್ಲಿ 20ಎಕರೆ ಪ್ರದೇಶವನ್ನು ಖ್ಯಾತ ನಟ ಟಿ.ಎನ್.ಬಾಲಕೃಷ್ಣ ಅವರಿಗೆ 1970ರಲ್ಲಿ  ಅಭಿಮಾನ್‌ ಸ್ಟುಡಿಯೋ ನಿರ್ಮಿಸಲು ಈ ಭೂಮಿಯನ್ನು ಗುತ್ತಿಗೆಗೆ ನೀಡಲಾಗಿತ್ತು.  

ಯಾವ ಉದ್ದೇಶಕ್ಕಾಗಿ ಕಾಯ್ದಿಟ್ಟ ಅರಣ್ಯ ಪ್ರದೇಶವು ಮಂಜೂರಾತಿ ಮಾಡಲಾಗಿರುತ್ತದೆಯೋ ಅದೇ ಉದ್ದೇಶಕ್ಕಾಗಿ ಭೂಮಿ ಬಳಸಬೇಕು ಎಂದು ಷರತ್ತು ವಿಧಿಸಲಾಗಿತ್ತು. ಬೆಂಗಳೂರು ನಗರ ಜಿಲ್ಲೆಯ  ವಿಶೇಷ ಜಿಲ್ಲಾಧಿಕಾರಿಗಳು, ಇವರು ಬಾಲಕೃಷ್ಣ ಇವರ ಮಕ್ಕಳಿಗೆ ಮಂಜೂರಾದ 20 ಎಕರೆ ಪೈಕಿ 10 ಎಕರೆ ಜಮೀನನ್ನು ಮಾರಾಟ ಮಾಡಿ ಬಂದ ಹಣದಿಂದ ಸ್ಟುಡಿಯೋವನ್ನು ಅಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಬೇಕೆಂದು ಹಾಗೂ ಕೆಲವು ಷರತ್ತುಗೊಳಪಟ್ಟು ಅನುಮತಿಯನ್ನು ನೀಡಿದ್ದರು. ಅದರೆ ಅವರ ಮಕ್ಕಳು 12 ಎಕರೆ ಪ್ರದೇಶವನ್ನು ಮಾರಾಟ ಮಾಡಿರುತ್ತಾರೆ ಹಾಗೂ ಅಭಿಮಾನ್ ಚಿತ್ರ ಸ್ಟುಡಿಯೋದ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಕೈ,ಗೊಂಡಿರುವುದಿಲ್ಲ.

ದ್ದರಿಂದ ಮೇಲ್ಕಂಡ ಕಾರಣಗಳು ಮತ್ತು ಸುಪ್ರೀಂಕೋರ್ಟ್‌ ಆದೇಶದಲ್ಲಿನ ನಿರ್ದೇಶನಗಳನ್ನಯ ದಿವಂಗತ. ಟಿ.ಎನ್. ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಕುರಿತು ಮಂಜೂರಾದ ಆದೇಶವನ್ನು ರದ್ದುಪಡಿಸಿ ಅರಣ್ಯ ಇಲಾಖೆಯ ಹೆಸರಿಗೆ ವರ್ಗಾಯಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.

More articles

Latest article