ಹಾಸನ ಜಿಲ್ಲೆಯಲ್ಲೊಂದು ಅಪರೂಪದ ಪ್ರಸಂಗ

ಹಾಸನ : ಹಾಸನ ಜಿಲ್ಲೆಯಲ್ಲೊಂದು ಅಪರೂಪದ ಪ್ರಸಂಗ ನಡೆದಿದೆ. ಬಹಳ ವರ್ಷಗಳ ನಂತರ ಭೇಟಿಯಾದ ಗೆಳತಿಯರು ತಬ್ಬಿ ಮಾತಾಡಿದ್ದಾರೆ ಮತದಾನ ಮಾಡಲು ಬಂದಾಗ ಮುಖಾಮುಖಿಯಾದ ಗೆಳತಿಯರು ಸಂಭ್ರಮಪಟ್ಟಿದ್ದಾರೆ.

ಗುಳಗಳಲೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಲು ಬಂದ ಜಾನಮ್ಮ (94), ಫಾತಿಮಾ (93) ಸುಮಾರು ಹತ್ತಾರು ವರ್ಷಗಳ ನಂತರ ಭೇಟಿಯಾದರು. ಮುಖಾಮಖಿಯಾದ ಕೂಡಲೇ ಇಬ್ಬರು ಸಂತಸದಿಂದ ತಬ್ಬಿಕೊಂಡರು. ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದು ಸಕಲೇಶಪುರ ತಾಲೂಕಿನ ಗುಳಗಳಲೆ ಗ್ರಾಮದ ಮತಗಟ್ಟೆ.

ಮದುವೆಯಾದ ನಂತರ ಮತ್ತೆ ಭೇಟಿಯಾಗದ ಗೆಳತಿಯರು ಇಂದು ಭೇಟಿಯಾಗಿ ತುಂಬಾ ಖುಷಿಪಟ್ಟರು.

ಗೆಳೆತನಕ್ಕೆ ಯಾವುದೇ ಧರ್ಮ, ಜಾತಿ, ಮತ, ವಯಸ್ಸಿನ ಹಂಗಿಲ್ಲ ಎಂಬುದನ್ನು ಇಲ್ಲಿ ಕಾಣಬಹುದು. ಅಲ್ಲಿರುವುದೊಂದೇ ನಿಷ್ಕಲ್ಮಶ ಪ್ರೀತಿ, ಸ್ನೇಹ ಎಂಬ ಬಾಂಧವ್ಯ.

More articles

Latest article

Most read