ಐದು ವರ್ಷದ ಬಾಲಕ 3 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್ನ ಲಾಲ್ಪಟ್ಟಿಯಲ್ಲಿರುವ ಸೇಂಟ್ ಜಾನ್ಸ್ ಬೋರ್ಡಿಂಗ್ ಸ್ಕೂಲ್ನಲ್ಲಿ ನಡೆದಿದೆ.
ಶಾಲೆಗೆ ಬಂದ ಕೂಡಲೇ ಪ್ರಾರ್ಥನೆ ಸಲ್ಲಿಸುವ ಮುನ್ನ ತನ್ನ ಬ್ಯಾಗ್ನಿಂದ ಬಂದೂಕು ತೆಗೆದು ಮೂರು ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡು ಮಗುವಿನ ಎಡಗೈಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದೆ. ನಗರದ ತ್ರಿವೇಣಿಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.
ಆರೋಪಿಯಾಗಿರುವ ಬಾಲಕ ಗುಂಡು ಹಾರಿಸಿ ಅಲ್ಲಿಂದ ಓಡಿಹೋಗಿದ್ದಾನೆ, ಶಾಲೆಯ ಆಡಳಿತ ಮಂಡಳಿಯ ಪ್ರಕಾರ, ಘಟನೆ ನಂತರ ಎರಡೂ ಮಕ್ಕಳ ಕುಟುಂಬದವರನ್ನು ಶಾಲೆಗೆ ಕರೆಸಲಾಯಿತು. ಚರ್ಚೆಯ ವೇಳೆ ಶೂಟ್ ಮಾಡಿದ್ದ ಮಗುವಿನ ತಂದೆ ಗನ್ ಜೊತೆಗೆ ಅಚೇರಿಯಿಂದ ಓಡಿ ಹೋಗಿದ್ದಾರೆ. ನಂತರ ಗುಂಡೇಟು ತಿಂದ ಮಗುವಿನ ತಂದೆ ಕೋಪಗೊಂಡು ಶಾಲೆಯ ಕಚೇರಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಈ ಬಗ್ಗೆ ತ್ರಿವೇಣಿಗಂಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಬಾಲಕ ಹಾಗೂ ಆತನ ಕುಟುಂಬದವರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.