ಸಕಲೇಶಪುರ: ಬೆಳ್ಳಂಬೆಳಿಗ್ಗೆ ಹೊಳೆ ಮಲ್ಲೇಶ್ವರ ದೇವಸ್ಥಾನದಲ್ಲಿ ಹೆಡೆ ಎತ್ತಿ ಕುಳಿತ ನಾಗರಹಾವು ಪ್ರತ್ಯಕ್ಷ ಘಟನೆ ಇಂದು ನಡೆದಿದೆ.
ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದಲ್ಲಿರುವ ಹೊಳೆಮಲ್ಲೇಶ್ವರ ದೇವಾಲಯ ಹೇಮಾವತಿ ನದಿ ದಂಡೆಯಲ್ಲಿದ್ದು, ಭಾರಿ ಮಳೆಗೆ ಭಾಗಶಃ ಮುಳುಗಿದೆ.
ನದಿ ನೀರಿನಿಂದ ಜಲಾವೃತವಾಗಿದ್ದ ದೇವಾಲಯದ ಒಳಗೆ ಇಂದು ನಾಗರಹಾವು ಕಾಣಿಸಿಕೊಂಡಿದೆ.
ಹೇಮಾವತಿ ನದಿ ನೀರು ನುಗ್ಗಿರುವುದರಿಂದ ಗರ್ಭಗುಡಿ ಬಾಗಿಲು ಮುಚ್ಚಲಾಗಿದ್ದು, ಗರ್ಭಗುಡಿಯ ಎದುರು ಗ್ರಾನೈಟ್ ಸ್ಲಾಬ್ ಮೇಲೆ ಹೆಡೆ ಎತ್ತಿ ಕುಳಿತ ನಾಗರಹಾವು ಪ್ರತ್ಯಕ್ಷವಾಗಿದೆ.