ಫ್ಯಾನ್ ಮೇಲೆ ಕುಳಿತು ಹೆಡೆಯೆತ್ತಿ ಬುಸುಗುಟ್ಟಿದ ನಾಗರಹಾವು!

ಹಾಸನ : ಮನೆಯ ಫ್ಯಾನ್‌‌ನಲ್ಲಿ ಕಾಣಿಸಿಕೊಂಡ ನಾಗರಹಾವು ಕೆಲಕಾಲ ಮನೆಮಂದಿಯನ್ನು‌ ಭಯಭೀತಗೊಳಿಸಿದ ಘಟನೆ ಸಕಲೇಶಪುರದಲ್ಲಿ ವರದಿಯಾಗಿದೆ.

ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ, ಹಳೇ ಸಂತವೇರಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮನೆಯೊಂದರ ಅಟ್ಟದ ಮೇಲೆ ಅಡಗಿ ಕುಳಿತಿದ್ದ ನಾಗರಹಾವನ್ನು ಮನೆಯ ಮಂದಿ ಗಮನಿಸಿದ್ದಾರೆ.

ಹಾವನ್ನು ನೋಡಿ ಬೆಚ್ಚಿಬಿದ್ದ ಮನೆಯಲ್ಲಿದ್ದವರು ಕಿರುಚಾಡುತ್ತಿದ್ದಂತೆ ಫ್ಯಾನ್‌ ಏರಿ ಕುಳಿತ ನಾಗರಹಾವು, ಫ್ಯಾನ್ ಮೇಲೆ ಹೆಡೆ ಎತ್ತಿ ಬುಸುಗುಟ್ಟಿದೆ.

ನಂತರ ಉರುಗತಜ್ಞ ದಸ್ತಗೀರ್‌ಗೆ ಮನೆ ಮಾಲೀಕರು ಕರೆ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿ ಸುರಕ್ಷಿತವಾಗಿ ನಾಗರಹಾವನ್ನು ಸೆರೆ ಹಿಡಿದ ನಂತರ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ದಸ್ತಗೀರ್ ಅವರು ನಂತರ ನಾಗರಹಾವನ್ನು ದೋಣಿಗಾಲ್ ಬಳಿಯ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

More articles

Latest article

Most read