ಜಯನಗರದಲ್ಲಿ ಸಿಕ್ಕಿದ್ದು ಬಿಜೆಪಿ ದುಡ್ಡು: ರಾಮಲಿಂಗಾರೆಡ್ಡಿ

ಬೆಂಗಳೂರು: ಜಯನಗರದಲ್ಲಿ 1 ಕೋಟಿ 40 ಲಕ್ಷ ನಗದು ಪತ್ತೆಯಾದ ಘಟನೆ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು ಇದು ಬಿಜೆಪಿ ದುಡ್ಡು, ಪ್ರಧಾನಿ ಕಾರ್ಯಕ್ರಮದ ವೆಚ್ಚಕ್ಕೆ ಸಂಗ್ರಹಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.

ನಾಳೆ ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಬರುತ್ತಿದ್ದಾರೆ. ಪ್ರಧಾನಿ ಕಾರ್ಯಕ್ರಮದ ವೆಚ್ಚಕ್ಕಾಗಿ ಹಣ ಸಂಗ್ರಹಿಸಿದ್ದರೆಂಬ ಮಾಹಿತಿ ಇದೆ. ಬಿಜೆಪಿಯವರಿಗೆ ಮಾನ, ಮರ್ಯಾದೆ ಅನ್ನೋದು ಇಲ್ಲ ಎಂದು ಅವರು ಹೇಳಿದರು‌.

ಜಯನಗರದಲ್ಲಿ ಸಿಕ್ಕಿಬಿದ್ದ ಹಣದ ಕುರಿತು ತಮ್ಮ ಮೇಲೆ ಬಿಜೆಪಿ ಮುಖಂಡರು ಆರೋಪಿಸುತ್ತಿರು ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಐಟಿ, ಇಡಿ ಇದೆ, ಬೇಕಿದ್ರೆ ತನಿಖೆ ಮಾಡಲಿ ಎಂದು ರಾಮಲಿಂಗಾರೆಡ್ಡಿ ಕಿಡಿ ಕಾರಿದರು.

ಆ ದುಡ್ಡು ಯಾರದ್ದು, ಕಾರು ಯಾರದ್ದು, ಬಿಜೆಪಿಯವರು ಏಕೆ ಅಲ್ಲಿದ್ದರು? ಎಲ್ಲವೂ ಗೊತ್ತಿದೆ, ಆದ್ರೆ ಬಿಜೆಪಿಯವರು ಕಾಂಗ್ರೆಸ್ ವಿರುದ್ದ ಆರೋಪಿಸುತ್ತಿದ್ದಾರೆ. ಇವರಿಗೆ ಮಾನ ಮರ್ಯಾದೆ ಇಲ್ಲ ಎಂದು ಅವರು ಹೇಳಿದ್ದಾರೆ.

More articles

Latest article

Most read