ಬೆಂಗಳೂರು: ೧೦ ವರ್ಷದಲ್ಲಿ ಮೋದಿ ಏನೇನು ಮಾಡಿದ್ರು. ನಿರುದ್ಯೋಗ ಡಬಲ್ ಆಗಿದೆ. ೪.೫% ಇದ್ದದ್ದು ೮% ಏರಿಕೆಯಾಗಿದೆ. ೮೩% ಯುವಕರು ನಿರುದ್ಯೋಗ ಅನುಭವಿಸ್ತಿದ್ದಾರೆ. ಯಾವುದೇ ಕೆಲಸಗಳು ಸಿಗ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಸಿಎಂ ವೀರಪ್ಪ ಮೊಯ್ಲಿ ಕೆಪಿಸಿಸಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಲೋಕಸಭಾ ಚುನಾವಣೆ ನಡೆಯುತ್ತಿದೆ. ನಮ್ಮ ದೃಷ್ಟಿಯಲ್ಲಿ ಇದು ಮಹತ್ವದ್ದು. ಬಿಜೆಪಿ ದೃಷ್ಟಿಯಲ್ಲೂ ಮಹತ್ವದ ಚುನಾವಣೆ. ದೇಶದ ಸಾಮಾಜಿಕ ಶಕ್ತಿ ಮತದಾರರಲ್ಲಿದೆ. ನಿರ್ಣಯ ತೆಗೆದುಕೊಳ್ಳಲು ಮತದಾರರು ಹೆದರಲ್ಲ. ಕೆಲವು ಬಾರಿ ಸೈಲೆಂಟ್,ವೈಲೆಂಟ್ ಕೂಡ ಆಗಿರುತ್ತದೆ. ಮೋದಿಯವರ ನಡವಳಿಕೆ ನೋಡಿದ್ದೇವೆ. ಬಿಜೆಪಿಯವರಿಗೆ ಬರಿ ಮೋದಿ ಅಷ್ಟೇ ಬೇಕು. ಒಬ್ಬ ಮನುಷ್ಯನ ಸುತ್ತ ದೇಶ ಸುತ್ತುತ್ತಿದೆ. ಏಕವ್ಯಕ್ತಿಯ ಆಡಳಿತ ದೇಶದಲ್ಲಿ ನಡೆಯುತ್ತಿದೆ. ಮತದಾರರು ಎಚ್ಚರಗೊಳ್ಳಬೇಕು ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.
೧೦ ವರ್ಷದಲ್ಲಿ ಮೋದಿ ಏನೇನು ಮಾಡಿದ್ರು. ನಿರುದ್ಯೋಗ ಡಬಲ್ ಆಗಿದೆ. ೪.೫% ಇದ್ದದ್ದು ೮% ಏರಿಕೆಯಾಗಿದೆ. ೮೩% ಯುವಕರು ನಿರುದ್ಯೋಗ ಅನುಭವಿಸ್ತಿದ್ದಾರೆ. ಯಾವುದೇ ಕೆಲಸಗಳು ಸಿಗ್ತಿಲ್ಲ. ಆಘಾತಕಾರಿ ಘಟನೆ ಎಂದೂ ಆಗಿರಲಿಲ್ಲ. ದೊಡ್ಡ ಪರಿವರ್ತನೆಯಾಗುವ ಕಾಲ ಬಂದಿದೆ. ಜಾಬ್ ಮಾರ್ಕೆಟಿಂಗ್ ೨೪/೨೫ ವಯಸ್ಸಿನವರು ೪೦%. ೨೫/೩೦ ರ ವಯಸ್ಸಿನವರು ೨೬% ನಿರುದ್ಯೋಗಿಳಾಗಿದ್ದಾರೆ. ರೈತರು ಕೂಡ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಮೂರು ವಿವಾದಾತ್ಮಕ ಕಾಯ್ದೆಗಳನ್ನ ತಂದ್ರು. ರೈತರ ಆದಾಯ ದ್ವಿಗುಣ ಮಾಡ್ತೇವೆ ಅಂದ್ರು.
ಮೈಕ್ರೋ ಸ್ಮಾಲ್ ಇಂಡಸ್ಟ್ರೀಸ್ ಸೊರಗಿವೆ. ಇಂಡಸ್ಟ್ರಿಯಲ್ ಎಸ್ಟೇಟ್ ಮರುಭೂಮಿಯಾಗಿವೆ. ಆ ಭೂಮಿ ರಿಯಲ್ ಎಸ್ಟೇಟ್ ಗೆ ಬಳಕೆಯಾಗ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರ ಮೇಲೆ ೩೧% ದಾಳಿ ಹೆಚ್ಚಿವೆ. ಶೋಷಿತ ಸಮುದಾಯಗಳು ಉದ್ಯೋಗ ಕಳೆದುಕೊಂಡಿವೆ. ಕಂಪನಿಗಳು ಮುಚ್ಚುತ್ತಿವೆ. ಟ್ರೈಬಲ್ ಆ್ಯಕ್ಟ್ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.