ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕಣದಲ್ಲಿದ್ದಾರೆ. ಇತ್ತ ಪುತ್ರನ ರಾಜಕೀಯ ಭವಿಷ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪುತ್ರ ಮೃಣಾಲ್ರನ್ನು ಗೆಲ್ಲಿಸಲು ಲಕ್ಷ್ಮೀ ಹೆಬ್ಬಾಳ್ಕರ್ ಹಲವು ತಂತ್ರಗಾರಿಕೆಯೊಂದಿಗೆ ಅಬ್ಬರದ ಪ್ರಚಾರ ನಡೆಸಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಕಾರ್ಡ್ ಪ್ಲೇ ಮಾಡಿದ್ದಾರೆ. ನನ್ನ ಮೈಯಲ್ಲಿ ಹರಿಯುತ್ತಿರುವುದು ಚೆನ್ನಮ್ಮನ ರಕ್ತ, ನನ್ನ ಪುತ್ರನ ಮೈಯಲ್ಲಿ ಹರಿಯುತ್ತಿರುವುದು ಪಂಚಮಸಾಲಿ ರಕ್ತ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ವಿರುದ್ಧ ಜಾತಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಂತ್ರಕ್ಕೆ ಅಲರ್ಟ್ ಆಗಿದ್ದ ಬಿಜೆಪಿಯಿಂದ ಬಣಜಿಗ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಂಚಮಸಾಲಿ ಅಲ್ಲ, ಬಣಜಿಗ ಎಂದಿದ್ದ ಮುರಗೇಶ ನಿರಾಣಿ. ಕಾಂಗ್ರೆಸ್ ಅಭ್ಯರ್ಥಿ, ಹೆಬ್ಬಾಳ್ಕರ್ ಪುತ್ರ ಮೃಣಾಲ್ ಕೂಡ ಬಣಜಿಗ ಸಮಾಜಕ್ಕೆ ಸೇರಿದ್ದಾರೆ. ನಮ್ಮ ಸಮಾಜದ ಮತ ಓಲೈಕೆಗೆ ತಾನು ಪಂಚಮಸಾಲಿ ಎಂದು ಹೆಬ್ಬಾಳ್ಕರ್ ಹೇಳಿಕೊಳ್ತಿದ್ದಾರೆ ಎಂದು ಆರೋಪಿದ್ದರು ನಿರಾಣಿ.
ಮುರಗೇಶ ನಿರಾಣಿ ಹೇಳಿಕೆ ಖಂಡಿಸಿ ಪಂಚಮಸಾಲಿ ಸಮಾಜ ಇದೀಗ ಸಚಿವೆ ಹೆಬ್ಬಾಳ್ಕರ್ ಬೆನ್ನಿಗೆ ನಿಂತಿದೆ. ನಿರಾಣಿಯನ್ನು ಚೆನ್ನಮ್ಮಳ ಆಸ್ಥಾನದಲ್ಲಿದ್ದ ಮಲ್ಲಪ್ಪ ಶೆಟ್ಟಿಗೆ ಹೋಳಿಸಿ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಸಂಘಟನೆ ಆಗಿರುವ ಪಂಚಮಸಾಲಿ ಒಡೆಯಲು ನಿರಾಣಿ ಯತ್ನಿಸುತ್ತಿದ್ದಾರೆಂದು ಟಾಂಗ್ ನೀಡಲಾಗಿದೆ.
ಹೆಬ್ಬಾಳ್ಕರ್ ಪಂಚಮಸಾಲಿ ಆಟಕ್ಕೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೈಲೆಂಟ್ ಆಗಿದ್ದಾರೆ. ಲೋಕಸಭೆ ಚುನಾವಣೆ ಜಾತಿ-ಧರ್ಮ ಮೀರಿದ್ದು ಎಂದಷ್ಟೇ ಹೇಳಿಕೆ ನೀಡಿದ ಜಗದೀಶ್ ಶೆಟ್ಟರ್, ನಾನು ಜಾತಿ ಆಧಾರದಲ್ಲಿ ಮತ ಕೇಳಲ್ಲ, ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿನಿ ಎಂದಿದ್ದಾರೆ.