ಬೆಂಗಳೂರು: ನಾ ಕಾವೂಂಗಾ ನಾಕಾನೇ ದೂಂಗಾ ಅಂತೀರ. ನಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನ ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡ್ರಿ. ಶೋಭಾ ಮೇಲೆ ೪೪ ಕೋಟಿ ಆರೋಪವಿದೆ. ಅವರನ್ನ ಹೇಗೆ ಸಚಿವೆಯನ್ನಾಗಿ ಮಾಡಿದ್ರಿ. ಇದು ನ್ಯಾಯಕ್ಕೆ ವಿರುದ್ಧವಾದುದು. ಶೋಭಾ ಕರಂದ್ಲಾಜೆಯವರನ್ನ ತಕ್ಷಣ ಕೆಳಗಿಳಿಸಿ. ಎಲೆಕ್ಟ್ರೋ ಬಾಂಡ್ ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಇಡಿ ರೇಡ್ ಮಾಡಿಸ್ತೀರ.ನಂತರ ಹಣವನ್ನ ಕಲೆಕ್ಟ್ ಮಾಡ್ತೀರ. ಭ್ರಷ್ಟಾಚಾರ ಅಂದ್ರೆ ಮೋದಿ ಸರ್ಕಾರ ಬರುತ್ತೆ. ನಮ್ಮ ರಾಜ್ಯಕ್ಕೆ ಬಂದಾಗ ಉತ್ತರ ಕೊಡಬೇಕು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜೀವ್ ಗೌಡ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಪ್ರಧಾನಿ ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅವರು ಬರುವ ಮುನ್ನ ಪ್ರಶ್ನೆಗಳಿವೆ. ಆ ಪ್ರಶ್ನೆಗಳಿಗೆ ಅವರು ಉತ್ತರಿಸಬೇಕು. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದೊಡ್ಡದಿದೆ. ಮೇಕೆದಾಟಿಗೆ ಪ್ರಪೋಸಲ್ ಕೊಟ್ಟಿದ್ದೆವು. ಯಾಕೆ ಎನ್ವಿರ್ನಾಮೆಂಟ್ ಅಪ್ರೂವಲ್ ಕೊಟ್ಟಿಲ್ಲ. ಕೃಷ್ಣ ಟ್ರಿಬ್ಯೂನಲ್ ಆಗಿ ೧೦ ವರ್ಷ ಆಯ್ತು. ಯಾಕೆ ಗೆಜೆಟ್ ಹೊರಡಿಸಿಲ್ಲ. ಅಪ್ಪರ್ ಭದ್ರಾಗೆ ೫೩೦೦ ಕೋಟಿ ಘೋಷಿಸಿದ್ರು. ಯಾಕೆ ಇಲ್ಲಿಯವರೆಗೆ ಅದರ ಹಣ ಬಿಡುಗಡೆ ಮಾಡಿಲ್ಲ. ೧೫ ನೇ ಹಣಕಾಸು ಆಯೋಗದ ರಿಪೋರ್ಟ್ ಏನಿದೆ. ಕರ್ನಾಟಕಕ್ಕೆ ೫೪೦೦ ಕೋಟಿ ಶಿಫಾರಸು ಮಾಡಿತ್ತು. ಅದರ ಬಗ್ಗೆ ಯಾಕೆ ಚಕಾರವಿಲ್ಲ. ಇಂಪ್ಲಿಮೆಂಟ್ ಮಾಡ್ತೇವೆ ಅಂದವರು ಯಾಕೆ ಮಾಡಿಲ್ಲ. ಫೈನಾನ್ಸ್ ಕಮೀಷನ್ ರೆಕಮೆಂಡೇಷನ್ ಮಾಡಿತ್ತು. ಯಾಕೆ ಹಣವನ್ನ ನಮಗೆ ಬಿಡುಗಡೆ ಮಾಡಿಲ್ಲ. ಪೆರಿಪರಲ್ ರಿಂಗ್ ರಸ್ತೆಗೆ ಹಣ ಯಾಕೆ ಕೊಟ್ಟಿಲ್ಲ. ಪ್ರಧಾನಿ ಸಬರಬನ್ ರೈಲು ಉದ್ಘಾಟಿಸಿದ್ರು. ೪೦ ತಿಂಗಳಲ್ಲಿ ಯೋಜನೆ ಪೂರ್ಣ ಅಂದ್ರಿ. ಈಗ ೨೦ ತಿಂಗಳಾಯ್ತು ಎಲ್ಲಿ ಹೋಯ್ತು ಯೋಜನೆ. ಬರ ಪರಿಹಾರದ ಬಗ್ಗೆ ಗಮನವೇ ಕೊಟ್ಟಿಲ್ಲ. ೨೨೩ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹೆಚ್ಚಿದೆ. ಗ್ರಾಮೀಣ ಭಾಗದ ಜನ ಸಂಕಷ್ಟ ದಲ್ಲಿದ್ದಾರೆ. ಇಲ್ಲಿಯವರೆಗೆ ಪರಿಹಾರದ ಹಣ ಕೊಟ್ಟಿಲ್ಲ ಎಂದು ಪ್ರಧಾನಿ ಮೋದಿಗೆ ರಾಜೀವ್ ಗೌಡ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
ಬಿಜೆಪಿ ಕ್ಯಾಂಡಿಡೇಟ್ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಇಲ್ಲ. ಅವರ ಕಾರ್ಯಕರ್ತರೇ ವಿರೋಧ ಮಾಡ್ತಾರೆ. ಉತ್ತರದಲ್ಲಿ ಜೆಡಿಎಸ್ ಕಾರ್ಯಕರ್ತರು ನಮ್ಮ ಜೊತೆ ಬಂದಿದ್ದಾರೆ. ಎಸ್.ಟಿ.ಸೋಮಶೇಖರ್ ಬೆಂಬಲ ಕೊಟ್ಟಿದ್ದಾರೆ. ಅದು ನಮಗೆ ಶಕ್ತಿ ತುಂಬಲಿದೆ. ಬಹಿರಂಗವಾಗಿಯೇ ಅವರು ಬೆಂಬಲ ನೀಡ್ತಾರೆ. ಶೋಭಾ ಕರಂದ್ಲಾಜೆ ಬಗ್ಗೆ ಪ್ರಚಾರ ಮಾಡ್ತೇವೆ. ಇಡಿ ಕೇಸ್ ಬಗ್ಗೆ ಜನರಿಗೆ ತಿಳಿಸ್ತೇವೆ. ಮಾಧ್ಯಮಗಳು ಅದರ ಬಗ್ಗೆ ಬೆಳಕು ಚೆಲ್ಲಬೇಕು. ನಮ್ಮದು ಸ್ವಾತಂತ್ರ್ಯ ಹೋರಾಟದ ಫ್ಯಾಮಿಲಿ. ಸಬರಬನ್ ಬಗ್ಗೆ ನಾನು ಹೋರಾಟ ಮಾಡಿದ್ದೇನೆ. ಕ್ಲೈಮೆಟ್ ಆಕ್ಷ್ಯನ್ ಪ್ಲಾನ್ ತಂದವನು ನಾನು. ನಮ್ಮ ದೊಡ್ಡಪ್ಪ ಉತ್ತರದಲ್ಲೇ ಜನಪ್ರತಿನಿಧಿಯಾಗಿದ್ದರು. ಬೆಮೆಲ್, ಮೈಸೂರು ಲ್ಯಾಂಪ್ಸ್ ತಂದವರು ಅವರು. ಹಾಗಾಗಿ ಜನರಿಗೆ ಇದೆಲ್ಲವೂ ಗೊತ್ತಿದೆ. ನಾನು ಪ್ಲಾನಿಂಗ್ ಕಮೀಷನ್ ಆಯೋಗದಲ್ಲಿದ್ದೆ. ಹಲವು ಯೋಜನೆಗಳನ್ನ ನಾನುತಂದಿದ್ದೆ. ಪಾಸಿಟೀವ್ ಮೆಸೇಜ್ ನಲ್ಲೇ ಮುಂದೆ ಹೋಗ್ತಿದ್ದೇವೆ. ಮೋದಿ ಸರ್ಕಾರದ ಅನ್ಯಾಯವನ್ನ ತಿಳಿಸ್ತೇವೆ. ಕರ್ನಾಟಕಕ್ಕೆ ಆದ ಅನ್ಯಾಯದ ಬಗ್ಗೆ ಹೇಳ್ತೇನೆ. ಬಿಜೆಪಿಗೆ ಯಾರು ಓಟು ಹಾಕ್ತಾರೆ. ಅವರು ಕರ್ನಾಟಕ ವಿರೋಧಿಗಳು ಅಂತ ಹೇಳ್ತೇನೆ ಅಂತ ಪ್ರೊ.ರಾಜೀವ್ ಗೌಡ ಹೇಳಿದ್ದಾರೆ.