ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತದೆ. ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಹಿತವನ್ನು ಕಾಪಾಡಿವೆ. ಬಿಟ್ಟಿಭಾಗ್ಯ ಎಂದು ವಿರೋಧ ಪಕ್ಷದವರು ವಿರೋಧ ಮಾಡುತ್ತಿದ್ದರು. ಈಗ ಅವರೇ ಉಚಿತ ಕೊಡುಗೆಗಳ ಮೊರೆ ಹೋಗಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣದಿಂದ ನಾನು ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು ಎಂದು ಪಿಯು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣವನ್ನು ಉಳಿಸಿ ಮಹಿಳೆಯೊಬ್ಬರು ಮನೆಗೆ ಫಿಡ್ಜ್ ತೆಗೆದುಕೊಂಡಿದ್ದಾರೆ. ಕಷ್ಟದಲ್ಲಿ ಜೀವನ ನಡೆಸುತ್ತಿದ್ದ ಹೆಣ್ಣು ಮಕ್ಕಳು ಉತ್ತಮವಾದ ಜೀವನ ನಡೆಸಲು ಸಾಧ್ಯವಾಗಿದೆ. ಇದೇ ಬಿಜೆಪಿಯವರು ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಪಟ್ಟಿ ಮಾಡಿದರೆ ಒಂದೂ ಸಿಗುವುದಿಲ್ಲ.
ಬಿಜೆಪಿಯವರು ಮಾಡುವ ಮಹಿಳಾ ಸಮಾವೇಶದಲ್ಲಿ ಗ್ಯಾರಂಟಿಯಿಂದ ಯಾರು ಪ್ರಯೋಜನ ಪಡೆದಿಲ್ಲ ಎಂದು ಲೆಕ್ಕ ಹಾಕಲಿ. ಅವರಿಗೆ ಯಾರೂ ಸಿಗುವುದಿಲ್ಲ. ಈ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಗ್ಯಾರಂಟಿ ಯೋಜನೆಗಳ ಲಾಭ ಪಡೆದಿದ್ದಾರೆ. ಗ್ಯಾರಂಟಿ ಸುಳ್ಳು ಎಂದರೆ ಜನರೇ ಬಿಜೆಪಿಗೆ ಬುದ್ದಿ ಕಲಿಸಲಿದ್ದಾರೆ.
ಮನೆ, ಮನೆಗೆ ಗ್ಯಾರಂಟಿ ಕಾರ್ಡ್ ಹಂಚಿಕೆ
ಕಾಂಗ್ರೆಸ್ ಹೈಕಮಾಂಡ್ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಈ ಗ್ಯಾರಂಟಿ ಕಾರ್ಡ್ ಗಳನ್ನು ಮನೆ, ಮನೆಗೆ ತಲುಪಿಸಲಾಗುವುದು.. ವಿದ್ಯಾರ್ಥಿಗಳ ಸಾಲ ಮನ್ನಾ, ವರ್ಷಕ್ಕೆ 1 ಲಕ್ಷ ನೀಡುವ ಮಹಾಲಕ್ಷ್ಮಿ ಯೋಜನೆ, ಅಪ್ರೆಂಟಿಸ್ ವೇಳೆ ಯುವಕರಿಗೆ 1 ಲಕ್ಷ, 30 ಲಕ್ಷ ಸರ್ಕಾರಿ ಕೆಲಸಗಳ ಭರ್ತಿ ಮಾಡಿ ಅದರಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ನೀಡಲಾಗುತ್ತದೆ.
ದೇಶದಲ್ಲೇ ಕಾಂಗ್ರೆಸ್ ಪರವಾದ ಅಲೆಯಿದೆ. ಕರ್ನಾಟಕದಲ್ಲಿ ನಾವು ನಿರಿಕ್ಷೇ ಮಾಡಿದ್ದಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಎಸ್.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಅವರಂತಹ ನಾಯಕರು ನಿಭಾಯಿಸಿರುವ ಹುದ್ದೆಗೆ ನನ್ನನ್ನು ನೇಮಕ ಮಾಡಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.
ರಾಜ್ಯಸಭಾ ಮಾಜಿ ಸದಸ್ಯರಾದ ಎಲ್ ಹನುಮಂತಯ್ಯ ಅವರ ಮಾತುಗಳು
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ಗಳನ್ನು ಮನೆಗಳಿಗೆ ಹಂಚದಂತೆ ತಡೆಯೊಡ್ಡಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ. ಇದು ಹಾಸ್ಯಸ್ಪದವಾದ ಸಂಗತಿ, ಗ್ಯಾರಂಟಿಗಳಿಗೆ ಹೆದರಿ ಬಿಜೆಪಿ ಹೀಗೆ ಮಾಡುತ್ತಿದೆ. ಕರ್ನಾಟಕದಲ್ಲಿ ನಮ್ಮ ಸಾಧನೆಗಳನ್ನು ನಾವು ಜನರಿಗೆ ಹೇಳುತ್ತಿದ್ದೇವೆ. ಅದೇ ರೀತಿ ಕಾಂಗ್ರೆಸ್ ಹೈಕಮಾಂಡ್ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ಯೋಜನೆ ನಮ್ಮದು.
ಕರ್ನಾಟಕ ವಿಧಾನಸಭೆಯಲ್ಲಿ ಸೋಲು ಕಂಡಂತೆ, ಲೋಕಸಭೆಯಲ್ಲೂ ಸೋಲು ಕಾಣುತ್ತೇವೆ ಎಂದು ಬಿಜೆಪಿ ಹೆದರಿಕೊಂಡಿದೆ. ಗ್ಯಾರಂಟಿ ಜಾರಿ ಮಾಡುವ ಮುಂಚೆ ಇದರಿಂದ ಸರ್ಕಾರದ ಖಜಾನೆ ಖಾಲಿಯಾಗುತ್ತದೆ ಎಂದು ಹೇಳುತ್ತಿದ್ದರು. ಯೋಜನೆಗಳು ಯಶಸ್ವಿಯಾದ ನಂತರ ಎಲ್ಲರಿಗೂ ಕೊಡಿ ಎಂದರು. ಅವರಲ್ಲೇ ಗೊಂದಲವಿದೆ. ಆದರೆ ಜನರ ಅಭಿವೃದ್ದಿ ಮಾಡಲು ಕಾಂಗ್ರೆಸ್ ಪಕ್ಷಕ್ಕೆ ಗೊಂದಲವಿಲ್ಲ.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಬಿಜೆಪಿ ಕಳೆದ 10 ವರ್ಷಗಳಲ್ಲಿ ಶೋಷಿತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಕರಾಳವಾದ ಕಾನೂನುಗಳನ್ನು ತಂದಿದೆ. ಬಿಜೆಪಿ ಎಂದರೆ ಕರಾಳ ಸರ್ಕಾರ ನಡೆಸುತ್ತಿರುವ ಪಕ್ಷ. ರೈತರ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿದೆ ಬಿಜೆಪಿ. 700 ಕ್ಕೂ ಹೆಚ್ಚು ರೈತರು ಪ್ರತಿಭಟನೆ ವೇಳೆ ಸತ್ತರೂ ದೇಶದ ಪ್ರಧಾನಿಗಳು ಒಂದೇ ಒಂದು ಕ್ಷಮೆ ಕೇಳಲಿಲ್ಲ.
ಭಾರತದಲ್ಲಿ ಶೇ 1 ರಷ್ಟು ಜನ 45 ರಷ್ಟು ಸಂಪತ್ತು ಇಟ್ಟುಕೊಂಡಿದ್ದಾರೆ. ಶೇ 10 ರಷ್ಟು ಜನ ಶೇ 60 ರಷ್ಟು ಸಂಪತ್ತು ಇಟ್ಟುಕೊಂಡಿದ್ದಾರೆ. ಬಡವರ ಸಂಪತ್ತು ಸಂಪೂರ್ಣ ಕಡಿಮೆ ಆಗಿದೆ. ಬಿಜೆಪಿ ಬಡವರ ಪರವಾದ ಸರ್ಕಾರವಲ್ಲ, ಶ್ರೀಮಂತರ ಪರವಾದ ಸರ್ಕಾರ. ಇವರ ಬಳಿ ಬಡವರ ಕಲ್ಯಾಣಕ್ಕೆ ಯಾವುದೇ ಯೋಜನೆಗಳಿಲ್ಲ.
6.5 ಸಾವಿರ ಕೋಟಿ ಅಕ್ರಮ ಹಣವನ್ನು ಎಲೆಕ್ಟೋರಲ್ ಬಾಂಡ್ ಮೂಲಕ ಬಿಜೆಪಿ ದೋಚಿದೆ. ಇದನ್ನು ಇಡಿ, ಐಟಿ ಮೂಲಕ ಒಂದಷ್ಟು ಕಂಪೆನಿಗಳ ಮೇಲೆ ದಾಳಿ ಮಾಡಿಸಿ ರೌಡಿಗಳು ಹಫ್ತಾ ವಸೂಲಿ ಮಾಡಿದಂತೆ 15 ಜನರಿಂದ 300 ಕೋಟಿಗೂ ಹೆಚ್ಚು ಹಣವನ್ನು ದೋಚಲಾಗಿದೆ. ಕಂಪೆನಿ ಆಕ್ಟ್ ಪ್ರಕಾರ ಸೆಕ್ಷನ್ 182 ಪ್ರಕಾರ 7.5 ರಷ್ಟು ಹಣವನ್ನು ದಾನ ಮಾಡಬಹುದು ಎನ್ನುವ ನೀತಿ ತಂದು ದರೋಡೆ ಮಾಡಿದ್ದಾರೆ.
ಯಾವ ಕ್ಷೇತ್ರದಲ್ಲೂ ಅಭಿವೃದ್ದಿ ಕಂಡಿಲ್ಲ ಭಾರತ. ಶಿಕ್ಷಣ, ಆರೋಗ್ಯ ಸೇರಿದಂತೆ ಯಾವುದೇ ಜನ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರದೆ ಜಿಎಸ್ ಟಿ ಜಾರಿಗೆ ತಂದು ಬಡ ಜನರ ಹಣವನ್ನು ಲೂಟಿ ಮಾಡಲಾಗುತ್ತಿದೆ. ಜನರನ್ನು ಹಿಂಡಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಎಸ್ ಟಿಯನ್ನು ಸುಧಾರಣೆ ಮಾಡಲಾಗುವುದು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಇವರು ಸೇರಿದಂತೆ ಕೆಪಿಸಿಸಿ ಪ್ರಚಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.