ಬೆಂಗಳೂರು: ಯಾರೊಂದಿಗೂ ಯಾವುದೇ ವಿರೋಧ ಇಟ್ಟುಕೊಳ್ಳದೆ, ವೈಮನಸ್ಸು ಬಿಟ್ಟು ಎಲ್ಲ ನಾಯಕರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.
ಅವರು, ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೂತನ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯವಾಗಿ ಆಯೋಜಿಸುವ ಸಮಾವೇಶಗಳು ಹೆಚ್ಚು ಜನರನ್ನು ತಲುಪಲಿ. ಹೆಚ್ಚೆಚ್ಚು ಜನರಿಗೆ ಗ್ಯಾರಂಟಿ ಯೋಜನೆಗಳು ತಲುಪುವಂತೆ ನೋಡಿಕೊಳ್ಳಿ ಎಂದರು.
ಸಿಎಂ, ಡಿಸಿಎಂ ಕಾಶಪ್ಪನವರ ಸಂಪರ್ಕದಲ್ಲಿದ್ದಾರೆ:ಎಂಬಿ ಪಾಟೀಲ್
ಇದೆ ವೇಳೆ ಬಾಗಲಕೋಟೆ ಭಿನ್ನಮತದ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್ ಅವರು, ಸಿಎಂ, ಡಿಸಿಎಂ ಕಾಶಪ್ಪನವರ ಸಂಪರ್ಕದಲ್ಲಿದ್ದಾರೆ. ಭಿನ್ನಮತ ಪರಿಹರಿಸುವ ಕೆಲಸ ನಡೆದಿದೆ. ಮನಸ್ಸಿನಲ್ಲಿ ನೋವಿದೆ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ. ಅವರನ್ನ ಸಮಾಧಾನ ಮಾಡುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
ಇವತ್ತು ಗ್ಯಾರೆಂಟಿ, ಬಿಜೆಪಿ ವೈಫಲ್ಯಗಳ ಬಗ್ಗೆ ಚರ್ಚೆಯಾಗಿದೆ. ಕಾಂಗ್ರೆಸ್ ಗೆ ಗೆಲ್ಲುವ ಅವಕಾಶಗಳು ಹೆಚ್ಚಿದೆ. ನಾವು ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಬಿಜೆಪಿ ವೈಫಲ್ಯ ಜನರಿಗೆ ತಿಳಿಸಬೇಕಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡ್ತೇವೆ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.