ಮಗು ಇರುವ ಜಾಗ ತಲುಪಿದ ರಕ್ಷಣಾ ಸಿಬ್ಬಂದಿ: ಯಶಸ್ಸಿನತ್ತ ಕಾರ್ಯಾಚರಣೆ

ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಬಾಲಕನನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದ್ದು, ಮಗುವಿರುವ ಸ್ಥಳವನ್ನು ರಕ್ಷಣಾ ಸಿಬ್ಬಂದಿ ತಲುಪಿದ್ದಾರೆ.

ಜೆಸಿಬಿ, ಇಟ್ಯಾಚಿ ಶಬ್ದಕ್ಕೆ ಬೆದರಿರುವ ಬಾಲಕ ಹೆದರಿ ಅಳುತ್ತಿದ್ದು, ಅಳುತ್ತಿರುವ ಶಬ್ದವನ್ನು ರಕ್ಷಣಾ ಸಿಬ್ಬಂದಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

ಬಾವಿಗೆ ಬಿದ್ದಿರುವ ಮಗು ಸಾತ್ವಿಕ್‌ ತಾಯಿ ಪೂಜಾ ಖಾಸಗಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದು, ಮಗುವಿನ ಅಳುವಿನ ಶಬ್ದ ಕೇಳಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಸಿದ್ದಲಿಂಗದೇವರ ಕೃಪೆಯಿಂದ ಮಗು ಚೆನ್ನಾಗಿದ್ದಾನೆ. ಮಗು ರಕ್ಷಣೆ ಬಳಿಕ ಮರುನಾಮಕರಣ ಮಾಡುತ್ತೇವೆ. ಸಿದ್ದಲಿಂಗದೇವರ ಹೆಸರಲ್ಲಿ ಮರುನಾಮಕರಣ. ನನ್ನ ಮಗನಿಗೋಸ್ಕರ ಪ್ರಾರ್ಥಿಸಿದವರಿಗೆ ಧನ್ಯವಾದ ಅರ್ಪಿಸುತ್ತೇನೆ. ರಕ್ಷಣಾ ಸಿಬ್ಬಂದಿ ರಾತ್ರಿ- ಹಗಲು ಪ್ರಯತ್ನಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಅವರು ಹೇಳಿದ್ದಾರೆ.

More articles

Latest article

Most read