ಮೋದಿ ಸರ್ಕಾರಕ್ಕೆ ದಕ್ಷಿಣದ ರಾಜ್ಯಗಳೆಂದರೆ ತಾತ್ಸಾರ: ದಿನೇಶ್ ಗುಂಡೂರಾವ್

Most read

ಬೆಂಗಳೂರು: ನಮ್ಮ ರಾಜ್ಯದ ಬಳಿಕ ಈಗ ತಮಿಳುನಾಡು ನೆರೆ ಪರಿಹಾರ ನೀಡುವಂತೆ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕೇಂದ್ರ ಸರ್ಕಾರ ಕೇವಲ ಕರ್ನಾಟಕ ಮಾತ್ರವಲ್ಲ, ದಕ್ಷಿಣದ ರಾಜ್ಯಗಳನ್ನು ಅಸಡ್ಡೆ ಹಾಗೂ ತಾತ್ಸಾರದಿಂದ ನೋಡುತ್ತಿರುವುದಕ್ಕೆ ಉತ್ತಮ ಉದಾಹರಣೆಯಿದು ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ನಷ್ಟಕ್ಕೆ ಪರಿಹಾರ ನೀಡುವುದು ಕೇಂದ್ರದ ಕರ್ತವ್ಯ. NDRF ನಿಯಮಗಳ ಅನುಸಾರ ಕೇಂದ್ರ ನಷ್ಟ ಪೀಡಿತ ರಾಜ್ಯಗಳಿಗೆ ಪರಿಹಾರ ಒದಗಿಸಬೇಕು. ಆದರೆ ದಕ್ಷಿಣದ ರಾಜ್ಯಗಳಲ್ಲಿ BJPಯ ಪ್ರಾತಿನಿಧ್ಯ ಇಲ್ಲ ಎಂಬ ಕಾರಣಕ್ಕಾಗಿ ಮೋದಿ ಸರ್ಕಾರ ತಾರತಮ್ಯ ಎಸಗುತ್ತಿದೆ, ಇದು ಸರಿಯಲ್ಲ. ದಕ್ಷಿಣದ ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ತೋರಿಸುತ್ತಿರುವ ಕೇಂದ್ರದ ನಡೆ ಒಕ್ಕೂಟ ವ್ಯವಸ್ಥೆಗೆ ಮಾರಕ. ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಂದ ಕೇವಲ ಆದಾಯ ಬಯಸಿದರೆ ಸಾಲದು. ನಾವು ಕೇಂದ್ರಕ್ಕೆ ಕೊಟ್ಟ ಆದಾಯಕ್ಕೆ ಪ್ರತಿಫಲವಾಗಿ ಅನುದಾನ ಕೇಳುವುದು ನಮ್ಮ ಹಕ್ಕು.

ಅದೇ ರೀತಿ ಅನುದಾನ-ಪರಿಹಾರ ಕೊಡುವುದು ಕೂಡ ಕೇಂದ್ರ ಸರ್ಕಾರದ ಜವಾಬ್ಧಾರಿ. ರಾಜಕೀಯ ಕಾರಣಗಳಿಂದ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಿದರೆ ಅದರ ಪರಿಣಾಮವನ್ನು ಕೇಂದ್ರದ BJP ಸರ್ಕಾರ ಎದುರಿಸಲೇಬೇಕಾಗುತ್ತದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕೇಂದ್ರದ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

More articles

Latest article