ಗೆಲ್ಲೋಕಾಗಲ್ಲ ಎಂದು 12-13 ದೊಡ್ಡವರ ಸೀಟು ಬದಲಿಸಿದ ಬಿಜೆಪಿ : ಡಿಕೆಶಿ ಲೇವಡಿ

ಕೋಲಾರ: ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಗೆಲ್ಲೋಕೆ ಆಗಲ್ಲ ಅಂತಾನೆ ಬಿಜೆಪಿಯಲ್ಲಿ 12-13 ದೊಡ್ಡವರ ಸೀಟು ಬದಲಾವಣೆ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪುಟ್ಟ ಆಂಜಿನಪ್ಪ ಅವರನ್ನು ಮತ್ತೆ ಕಾಂಗ್ರೆಸ್ ಗೆ ಬರಮಾಡಿಕೊಂಡ ಅವರು ಮಾತನಾಡಿದರು.

ತಮ್ಮ ನೇತೃತ್ವದ ಸರ್ಕಾರವನ್ನು ತೆಗೆದ ಬಿಜೆಪಿ ಜೊತೆಗೇ ಕುಮಾರಸ್ವಾಮಿ ಕೈ ಜೋಡಿಸಿದ್ದಾರೆ. ಇವರ ನೀಚ ರಾಜಕಾರಣ ಜನರ ಅರಿವಿಗೆ ಬಂದಿದೆ. ಕೋಲಾರ, ಚಿಕ್ಕಬಳ್ಳಾಪುರ ಎರಡೂ ಸೀಟು ಗೆದ್ದೇ ಗೆಲ್ಲುತ್ತೇವೆ. ಇದಕ್ಕಾಗಿಯೇ ಯುವಕರಿಗೆ ಟಿಕೆಟ್ ನೀಡಿದ್ದೇವೆ. ಎಲ್ಲರೂ ಒಟ್ಟುಗೂಡಿ ಆ ಯುವಕರನ್ನು ಗೆಲ್ಲಿಸಿ ಸಂಸಂತ್ತಿಗೆ ಕಳುಹಿಸಬೇಕು.

ನಾವು ಎಂಟು ಜನ ಒಕ್ಕಲಿಗರಿಗೆ ಟಿಕೆಟ್ ಕೊಟ್ಟಿದ್ದೇವೆ. ಆದರೆ ದೇವೇಗೌಡ್ರು ಅವರ ಅಳಿಯನನ್ನೇ ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಯಾಕೆ ನಿಮ್ಮ ಪಕ್ಷದ ಚಿಹ್ನೆಗೆ ಬೆಲೆ ಇಲ್ವಾ? ಮುಂದೆ ಜೆಡಿಎಸ್ ಪಾರ್ಟಿ ಇರುವುದಿಲ್ಲ. ಜೆಡಿಎಸ್ ನಾಯಕರ ನಿರ್ಧಾರದಿಂದ ಕಾರ್ಯಕರ್ತರು ನೊಂದಿದ್ದಾರೆ ಎಂದು ಲೇವಡಿ ಮಾಡಿದರು.

ಪುಟ್ಟಆಂಜಿನಪ್ಪ ಮತ್ತೆ ಕಾಂಗ್ರೆಸ್ ಗೆ

ಶಿಡ್ಲಘಟ್ಟ ಕ್ಷೇತ್ರದ ಪುಟ್ಟ ಆಂಜಿನಪ್ಪ ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಗೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ‌ ಪುಟ್ಟ ಆಂಜನಪ್ಪ ಕಾಂಗ್ರೆಸ್ ಬಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟ ಆಂಜನಪ್ಪ ಅವರು, ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಗಿಂತಲೂ ಎರಡು ಪಟ್ಟು ಹೆಚ್ಚು ಮತಗಳನ್ನ ಪಡೆದಿದ್ದರು. ಇದೀಗ ಕಾಂಗ್ರೆಸ್ ನಾಯಕರು ಪಕ್ಷದ ಬಾವುಟ ನೀಡಿ ಅವರನ್ನು ಬರಮಾಡಿಕೊಂಡಿದ್ದಾರೆ.

More articles

Latest article

Most read