ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿದ ವ್ಯಕ್ತಿಯ ಹೇಳಿಕೆ ಆಧರಿಸಿ ಕೇಜ್ರಿವಾಲ್ ಬಂಧನ: ಆಪ್‌ ಸಚಿವೆ ಅತಿಶಿ ವಾಗ್ದಾಳಿ

Most read

ಹೊಸ ಅಬಕಾರಿ ನೀತಿ ಪ್ರಕರಣದಲ್ಲಿ ಭ್ರಷ್ಟಚಾರದ ನಡೆದಿದೆ ಎಂಧು ಆರೋಪಿಸಿ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅವರೇ ಈ ಪ್ರಕಣದ ಕಿಂಗ್ ಪಿನ್ ಎಂದು ಜಾರಿ ನಿರ್ದೇಶನಾಲಯ (ED) ಆರೋಪಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಆಪ್‌ ನಾಯಕಿ ದೆಹಲಿ ಸಚಿವೆ ಅತಿಶಿ ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವೆ ಅತಿಶಿ, ಶರತ್ ಚಂದ್ರ ರೆಡ್ಡಿ ಎಂಬ ವ್ಯಕ್ತಿಯ ಹೇಳಿಕೆ ಆಧರಿಸಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಶರತ್ ಚಂದ್ರ ರೆಡ್ಡಿ ಅರಬಿಂದೋ ಫಾರ್ಮಾದ ಮಾಲೀಕರು ಮತ್ತು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ಹಣ ಪಾವತಿಸಿದವರು. ಚುನಾವಣಾ ಬಾಂಡ್  ಮೂಲಕ ಬಿಜೆಪಿಗೆ ಹಣ ನೀಡಿದ ವ್ಯಕ್ತಿಯಿಂದ ಪಡೆದ ಮಾಹಿತಿ ಮೇರೆಗೆ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

ನವೆಂಬರ್ 9, 2022 ರಂದು ರೆಡ್ಡಿ ಅವರನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಲಿಲ್ಲ ಅಥವಾ ಮಾತನಾಡಲಿಲ್ಲ ಮತ್ತು ಆಪ್‌ನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದರು. ಹೇಳಿಕೆ ಬೆನ್ನಲೆ ಅವರನ್ನು ಇಡಿ ಬಂಧಿಸಿ ಹಲವು ತಿಂಗಳು ಜೈಲಿನಲ್ಲಿದ್ದ ನಂತರ ಹೇಳಿಕೆ ಬದಲಿಸಿದ ಅವರು, ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಅಬಕಾರಿ ನೀತಿ ವಿಚಾರವಾಗಿ ಮಾತನಾಡಿದ್ದೇನೆ ಎಂದು ಹೇಳಿದರು. ಅವರು ಹೇಳಿದ ತಕ್ಷಣ ಜಾಮೀನು ಸಿಕ್ಕಿದೆ. ಅವರನ್ನು ಬಿಟ್ಟು ಈಗ ಕೇಜ್ರಿವಾಲ್‌ ಅವರನ್ನು ಹಿಡಿದುಕೊಂಡಿದ್ದಾರೆ ಎಂದು ದೂರಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ, ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯ ತನಿಖೆಗಳು ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ಈ 2 ವರ್ಷಗಳ ತನಿಖೆಯಲ್ಲಿ ಒಂದು ಪ್ರಶ್ನೆ ಮತ್ತೆ-ಮತ್ತೆ ಉದ್ಭವಿಸುತ್ತಿದೆ. ಹಣದ ಜಾಡು ಎಲ್ಲಿದೆ? ಹಣ ಎಲ್ಲಿಗೆ ಹೋಯಿತು? ಆಪ್‌ ಪಕ್ಷದ ಯಾವುದೇ ನಾಯಕ, ಮಂತ್ರಿ ಅಥವಾ ಕಾರ್ಯಕರ್ತರಿಂದ ಅಪರಾಧದ ಆದಾಯವನ್ನು ವಸೂಲಿ ಮಾಡಲಾಗಿಲ್ಲ, ಹಾಗಿದ್ದಾಗ ಹಣ ಎಲ್ಲಿ ಹೋಯಿತು? ಎಂದು ಪ್ರಶ್ನೆ ಮಾಡಿದ್ದಾರೆ.

More articles

Latest article