ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಈಶ್ವರಪ್ಪ ನಿರ್ಧಾರ

Most read

 ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಬಂಡಾಯದ ಬಿಸಿ ಎದ್ದಿದೆ. ಅದರಲ್ಲಿ ಮಾಜಿ ಡಿಸಿಎಂ ಈಶ್ವರಪ್ಪ ತಮ್ಮ ಮಗನಿಗೆ ಹಾವೇರಿ ಟಿಕೆಟ್‌ ಕೈತಪ್ಪಿದ್ದು ಕೆಂಡಾಮಂಡಲವಾಗಿದ್ದು, ಯಡಿಯೂರಪ್ಪನವರ ಮಗ ರಾಘವೇಂದ್ರ ಎದುರು ಶಿವಮೊಗ್ಗದಿಂದ ಕೆಎಸ್ ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಈಶ್ವರಪ್ಪನವರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಬಳಿಕ ಲೋಕಸಭೆಯಲ್ಲಿ ಪುತ್ರನಿಗೂ ಟಿಕೆಟ್ ನಿರಾಕರಿಸಿದ ಬಿಜೆಪಿ ವಿರುದ್ಧ ಕೆಎಸ್ ಈಶ್ವರಪ್ಪ ಬಂಡಾಯ ಎದ್ದಿದ್ದಾರೆ. ಶಿವಮೊಗ್ಗದಿಂದ ಕೆಎಸ್ ಈಶ್ವರಪ್ಪ ಸ್ವತಂತ್ರ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಇಂದು ಬೆಂಬಲಿಗರ ಜೊತೆ ಮಹತ್ವದ ಸಭೆ ನಡೆಸಿದ ಈಶ್ವರಪ್ಪ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.

ಬೆಂಬಲಿಗರ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಆಲಿಸಿದ ಬಳಿಕ ಮಾತನಾಡಿದ ಈಶ್ವರಪ್ಪಕುಟುಂಬದ ಕೈಯಲ್ಲಿ ಪಕ್ಷ ಇರಬಾರದು. ಪ್ರಧಾನಿ ಮೋದಿ ಅಪೇಕ್ಷೆಯಂತೆ ಕರ್ನಾಟಕ ಬಿಜೆಪಿ ಆಗಬೇಕು. ಕುಟುಂಬ ರಾಜಕಾರಣದ ವಿರುದ್ದ ಮೋದಿ ಧ್ವನಿ ಎತ್ತಿದ್ದಾರೆ. ಹಾಗಾಗಿ ಬಂಡಾಯ ಸ್ಪರ್ಧ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಭಾವುಕರಾಗಿ ಆಡಿದ ಮಾತಲ್ಲ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ನಾನು ಸ್ಪತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಬಿಜೆಪಿ ಏನು ಮಾಡುತ್ತದೆ ಜಾಸ್ತಿ ಎಂದರೆ ಪಕ್ಷ ನನಗೆ ನೋಟಿಸ್ ನೀಡತ್ತೆ ಇಲ್ಲವೇ ಪಕ್ಷದಿಂದ ಉಚ್ಚಾಟಿಸುತ್ತಾರೆ. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ಮತ್ತೆ ಬಿಜೆಪಿ ನನ್ನನ್ನು ಸೇರಿಸಿಕೊಳ್ಳುತ್ತಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇಂತ ದಿನ ಬರುತ್ತೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ನನಗೆ, ನನ್ನವರಿಗೆ ಬೇಕು ಎಂಬುದು ಬದಲಾಗಬೇಕು. ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗೆ ನ್ಯಾಯ ಸಿಗಬೇಕು. ಪ್ರಧಾನಿ ಮೋದಿ ಆಶಯಕ್ಕ ನಾನು ಬದ್ಧ. ನಾನು ಖಂಡಿತ ಮಮೋದಿ ವಿರುದ್ಧ ಅಲ್ಲ. ಮೋದಿ ಮೂರನೇ ಭಾರಿಗೆ ಪ್ರಧಾನಿಯಾಗುತ್ತಾರೆ. ಪ್ರಧಾನಿ ಮೋದಿ ಆಶಯಕ್ಕ ನಾನು ಬದ್ಧ. ಮೋದಿ ವಿರುದ್ಧ ಹೋಗುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. 

More articles

Latest article