ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಲಘು ಭೂಕಂಪ, ತಿಮ್ಮಾಜನಹಳ್ಳಿಯಲ್ಲಿ 3.0 ಪ್ರಮಾಣ ದಾಖಲು

ದೊಡ್ಡಬಳ್ಳಾಪುರ : ತಾಲೂಕಿನ ತಿಮ್ಮಾಜನಹಳ್ಳಿ ಲಘುಭೂಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ (KSNDMC) ಕೇಂದ್ರ ತಿಳಿಸಿದೆ.

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ನ ತಿಮ್ಮಾಜನಹಳ್ಳಿ ಗ್ರಾಮದಿಂದ ಉತ್ತರದ 0.5 ಕಿ.ಮೀ ಇಂದು ಬೆಳಗ್ಗೆ 09:01:59ರ ಸಮಯದಲ್ಲಿ 3.0 ಪ್ರಮಾಣದಲ್ಲಿ ಭೂಕಂಪನವಾಗಿದೆ ಎಂದು ದಾಖಲಾಗಿರುವುದ್ದಾಗಿ KSMDMC ತಿಳಿಸಿದೆ.

ಇಂದು ಲಘು ಪ್ರಮಾಣದ ಭೂಕಂಪನವಾಗಿದ್ದು, ಇದರ ಅರಿವು ಜನರಿಗೆ ಗೊತ್ತಾಗುವುದಿಲ್ಲ, ಯಾವುದೇ ರೀತಿಯ ಹಾನಿಯೂ ಸಹ ಆಗುವುದಿಲ್ಲ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಮಸ್ಥರಾದ ದೇವರಾಜು ಎಂಬುವರು ಸಹ ನಮಗೆ ಯಾವುದೇ ರೀತಿಯ ಅನುಭವ ಆಗಲಿ ಭೂಮಿ ನಡುಗಿದ ಅನುಭವವಾಗಲಿ ತಿಳಿದಿಲ್ಲ, ಗ್ರಾಮದಲ್ಲಿ ಯಾವುದೇ ರೀತಿಯ ಹಾನಿ ಸಹ ಆಗಿಲ್ಲ ಎಂದು ತಿಳಿಸಿದರು.

ತಿಮ್ಮಾಜನಹಳ್ಳಿಯ ಸಮೀಪ ಇರುವ ಲಘುಮೇನಹಳ್ಳಿಯಲ್ಲಿ ಭೂಕಂಪನದ ಅನುಭವಾಗಿದೆ, ಮನೆಯ ಮೇಲ್ಛಾವಣಿ ಅಲುಗಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

More articles

Latest article

Most read