ನವದೆಹಲಿ: ಜಂತರ್ ಮಂತರ್ 2.0 ಪ್ರತಿಭಟನೆ ಹಿನ್ನೆಲೆಯಲ್ಲಿ ಸಿಜೆಪಿಯ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮುಂಬೈಯಿಂದ ದೆಹಲಿಗೆ ಆಗಮಿಸುತ್ತಿದ್ದಂತೆಯೇ ವಿಮಾನದ ಒಳಗಡೆಯೇ ವಶಕ್ಕೆ ಪಡೆಯಲಾಯಿತು.
ಇದಕ್ಕೂ ಮುನ್ನಾ, ಜೆಪಿಯ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನು ಬಂಧಿಸಿದ್ದಾರೆ.
ಇದುವರಗೂ 600ಕ್ಕೂ ಹೆಚ್ಚು ಜನರ ಬಂಧನ
ರಾಷ್ಟ್ರ ರಾಜಧಾನಿಯ ಎಲ್ಲ 15 ಪೊಲೀಸ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಪರಾಧ ಹಿನ್ನೆಲೆಯುಳ್ಳ 600ಕ್ಕೂ ಹೆಚ್ಚು ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೇ ವೇಳೆ, ಶುಕ್ರವಾರ ಪ್ರತಿಭಟನಾ ಸ್ಥಳದತ್ತ ತೆರಳಲು ಯತ್ನಿಸಿದ ಸುಮಾರು 200 ಪ್ರತಿಭಟನಾಕಾರರನ್ನು ನವದೆಹಲಿ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ.

