ನಕಲಿ ಮಾತ್ರೆ ಜಾಲದ ಬೆನ್ನತ್ತಿದ ಎಸ್‌ಐಟಿ: ಬೆಂಗಳೂರಿನ 3 ಫಾರ್ಮಸಿಗಳ ಮೇಲೆ ದಾಳಿ

ಬೆಂಗಳೂರು, ಅಕ್ಟೋಬರ್ 6: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ನಕಲಿ ಔಷಧ ದಂಧೆ ಪ್ರಕರಣದ ತನಿಖೆ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದೆ. ಪ್ರಕರಣದ ಆರೋಪಿಗಳ ವಿಚಾರಣೆಯಿಂದ ಸಿಕ್ಕ ಸುಳಿವುಗಳನ್ನು ಆಧರಿಸಿ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಮೂರು ಪ್ರಮುಖ ಫಾರ್ಮಸಿಗಳ ಮೇಲೆ ದಾಳಿ ನಡೆಸಿದ್ದಾರೆ.

ರಾಜರಾಜೇಶ್ವರಿ ನಗರದ ಆರ್‌ಆರ್ ಫಾರ್ಮಾ, ಚಾಮರಾಜಪೇಟೆಯ ಮೆಡಿ 365 ಎಲ್‌ಎಲ್‌ಪಿ ಫಾರ್ಮಾ ಹಾಗೂ ತಲಘಟ್ಟಪುರದ ಪಾಟೇಲ್ ಫಾರ್ಮಾಗಳಲ್ಲಿ ಎಸ್‌ಐಟಿ ತಂಡ ಪರಿಶೀಲನೆ ನಡೆಸಿದೆ.

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿಗಳಾದ ಪ್ರಶಾಂತ್ ಹಾಗೂ ಡಿಸ್ಟ್ರಿಬ್ಯೂಟರ್ ವೀರೇಶ್ ಅವರನ್ನು ವಿಚಾರಣೆಗೊಳಪಡಿಸಿದ ವೇಳೆ ಹಲವು ಮಹತ್ವದ ಮಾಹಿತಿಗಳು ಹೊರಬಂದಿವೆ ಎನ್ನಲಾಗಿದೆ. ಆರೋಪಿಗಳು ನಕಲಿ ಔಷಧಿಗಳನ್ನು ಖರೀದಿಸಿ ಅಥವಾ ವಿತರಿಸುತ್ತಿದ್ದ ಫಾರ್ಮಸಿಗಳ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಎಸ್‌ಐಟಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಏಪ್ರಿಲ್‌ನಿಂದ ಈವರೆಗೆ ನಕಲಿ ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿತ್ತೇ ಎಂಬುದರ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಫಾರ್ಮಸಿ ಮಾಲೀಕರಿಂದ ಮಾಹಿತಿ ಕಲೆಹಾಕಿದ್ದಾರೆ.

ನಕಲಿ ಔಷಧಿಗಳನ್ನು ಯಾವ ಮೂಲದಿಂದ ಪಡೆಯಲಾಗುತ್ತಿತ್ತು? ಎಷ್ಟು ಪ್ರಮಾಣದಲ್ಲಿ ಖರೀದಿ ಮಾಡಲಾಗಿತ್ತು? ಯಾರಿಗೆ ಮಾರಾಟ ಮಾಡಲಾಗುತ್ತಿತ್ತು? ಯಾವ ಆಸ್ಪತ್ರೆಗಳಿಗೆ ಔಷಧಿಗಳನ್ನು ಪೂರೈಕೆ ಮಾಡಲಾಗಿತ್ತು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲಾಗುತ್ತಿದೆ.

ದಾಳಿ ನಡೆಸಿದ ಬಳಿಕ ಮೂರು ಫಾರ್ಮಸಿಗಳ ಮಾಲೀಕರಿಗೂ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಔಷಧಿಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ ಎನ್ನಲಾಗಿದೆ.

ನಕಲಿ ಔಷಧಿಗಳ ಹಿಂದೆ ಇರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಎಸ್‌ಐಟಿ ತನಿಖೆ ಮುಂದುವರಿಸಿದೆ. ನಕಲಿ ಔಷಧಿಗಳ ತಯಾರಿಕೆ, ನಕಲಿ ಲೇಬಲ್‌ಗಳ ಮೂಲ, ಡಿಸ್ಟ್ರಿಬ್ಯೂಷನ್ ಜಾಲ ಹಾಗೂ ಔಷಧಿಗಳನ್ನು ಪಡೆಯುತ್ತಿದ್ದ ಸಂಸ್ಥೆಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ಬೆಂಗಳೂರಿನ ಮೂರು ಫಾರ್ಮಸಿಗಳ ಮೇಲಿನ ದಾಳಿಯ ಬೆನ್ನಲ್ಲೇ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಹೊರಬರುವ ಸಾಧ್ಯತೆ ಇದ್ದು, ನಕಲಿ ಔಷಧ ದಂಧೆಯ ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು ಎಸ್‌ಐಟಿ ಮುಂದಾಗಿದೆ.

More articles

Latest article

Most read