ಮಹಿಳೆಯರ ನ್ಯಾಯ ಹೋರಾಟಕ್ಕೆ ನಿರಂತರ ಪ್ರತಿರೋಧ ಅಗತ್ಯ: ನಾಗಲಕ್ಷ್ಮಿ ಚೌಧರಿ

ಬೆಂಗಳೂರು ಅ. 3: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಕ್ಕಾಗಿ ನಡೆಯುವ ಹೋರಾಟವು ಯಾವುದೇ ಒಂದು ಪ್ರಕರಣದ ತೀರ್ಪಿನೊಂದಿಗೆ ಮುಗಿಯಬಾರದು. ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೆ ನಿರಂತರವಾಗಿ ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಅಗತ್ಯವಿದೆ ಎಂದು ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ವಿಚಾರಸಂಕಿರಣದ ಮೂರನೇ ಗೋಷ್ಠಿಯಲ್ಲಿ ಪ್ರತಿಪಾದಿಸಲಾಯಿತು.

‘ಕೊಂದವರು ಯಾರು?’ ಆಂದೋಲನದ ವತಿಯಿಂದ ಅಕ್ಟೋಬರ್ 2ರಂದು ಬೆಂಗಳೂರಿನ ಸಭಾ ಆಡಿಟೋರಿಯಂನಲ್ಲಿ ನಡೆದ ವಿಚಾರಸಂಕಿರಣದ ಮೂರನೇ ಗೋಷ್ಠಿ ‘ಪ್ರತಿರೋಧ ಬೆಳೆಸುವುದು: ಹೊಣೆಗಾರಿಕೆಗೆ ಹಕ್ಕೊತ್ತಾಯ ಮತ್ತು ನ್ಯಾಯಕ್ಕಾಗಿ ಹೋರಾಟ’ ಎಂಬ ವಿಷಯದ ಮೇಲೆ ನಡೆಯಿತು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ‘ದಿ ನ್ಯೂಸ್ ಮಿನಿಟ್’ ಸಂಪಾದಕಿ ಧನ್ಯಾ ರಾಜೇಂದ್ರನ್, ವುಮೆನ್ ಅಂಡ್ ಸಿನಿಮಾ ಕಲೆಕ್ಟಿವ್, ಕೇರಳದ ಡಾ. ಆಶಾ ಅಚ್ಯು ಜೋಸೆಫ್ ಹಾಗೂ ವಕೀಲೆ ಪೂರ್ಣಾ ರವಿಶಂಕರ್ ಗೋಷ್ಠಿಯಲ್ಲಿ ಮಾತನಾಡಿದರು. ‘ಕೊಂದವರು ಯಾರು?’ ಅಭಿಯಾನದ ಮಲ್ಲಿಗೆ ಸಿರಿಮನೆ ಸಂವಾದ ನಿರ್ವಹಿಸಿದರು.

‘ಪ್ರತಿ ಮಹಿಳೆಯ ನೋವಿನ ಹಿಂದೆ ಒಂದು ಕಥೆಯಿದೆ’

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಮಾತನಾಡಿ, ಮಹಿಳೆಯೊಬ್ಬರು ಮಾತನಾಡಿದಾಗಲೂ ಅವರ ಹಿಂದೆ ನೋವಿನ ಮತ್ತು ಹೋರಾಟದ ಕಥೆಯೊಂದು ಇರುತ್ತದೆ. ಹಲವು ಪ್ರಕರಣಗಳಲ್ಲಿ ದೂರು ದಾಖಲಿಸುವುದೇ ವಿಳಂಬವಾಗುತ್ತಿದೆ ಎಂದು ಹೇಳಿದರು.

ಮಹಿಳೆಯರ ಹೋರಾಟಗಾರರ ನಿಸ್ವಾರ್ಥ ಹೋರಾಟವೇ ಇನ್ನಷ್ಟು ಜನರಿಗೆ ಧ್ವನಿ ಎತ್ತುವ ನೈತಿಕ ಶಕ್ತಿ ನೀಡಿದೆ. ಹೀಗಾಗಿ ಹೋರಾಟಗಾರರು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಅವರು ಕರೆ ನೀಡಿದರು.

ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿದ ಅವರು, ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ಸಾರ್ವಜನಿಕರ ಮೊಬೈಲ್‌ಗಳಲ್ಲಿ ಇದ್ದರೂ ಆರಂಭದಲ್ಲಿ ಯಾರೂ ಮಾತನಾಡಲಿಲ್ಲ. ಈ ಸಂದರ್ಭದಲ್ಲಿ ಮಹಿಳಾ ಆಯೋಗವೇ ಮೊದಲು ಪತ್ರ ಬರೆದಿತ್ತು ಎಂದು ಹೇಳಿದರು.

ಧರ್ಮಸ್ಥಳದ ದಾಖಲೆಗಳಲ್ಲಿನ ವ್ಯತ್ಯಾಸದ ಬಗ್ಗೆ ಪ್ರಶ್ನೆ

ಧರ್ಮಸ್ಥಳಕ್ಕೆ ಸಂಬಂಧಿಸಿದ ವಿಚಾರವನ್ನೂ ಪ್ರಸ್ತಾಪಿಸಿದ ನಾಗಲಕ್ಷ್ಮಿ ಚೌಧರಿ, ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಮತ್ತು ಪಂಚಾಯಿತಿ ದಾಖಲೆಗಳಲ್ಲಿರುವ ಸಾವುಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದೆ ಎಂದು ವಿಚಾರಸಂಕಿರಣದಲ್ಲಿ ಪ್ರಸ್ತಾಪಿಸಿದರು.

ಈ ವ್ಯತ್ಯಾಸಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಎಸ್‌ಐಟಿ ತನಿಖೆಗೆ ಸರ್ಕಾರದಿಂದ ಅಗತ್ಯವಾದ ಪೂರಕ ಬೆಂಬಲ ನೀಡಬೇಕು ಎಂದು ಮಹಿಳಾ ಆಯೋಗವು ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

ಮಹಿಳೆಯರ ಹೋರಾಟದೊಂದಿಗೆ ಮಹಿಳಾ ಆಯೋಗ ಸದಾ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು. ಯುವಜನರು ಬದಲಾವಣೆಯತ್ತ ಹೆಜ್ಜೆ ಇಡುತ್ತಿರುವುದನ್ನು ಉಲ್ಲೇಖಿಸಿದ ಅವರು, ಅವರೊಂದಿಗೆ ಹಿರಿಯರು ನಿಲ್ಲಬೇಕು ಮತ್ತು ಹೋರಾಟ ಮುಂದುವರಿಯಬೇಕು ಎಂದು ಹೇಳಿದರು.

‘ಹೊಣೆಗಾರಿಕೆ ಆರೋಪಿಯ ಖುಲಾಸೆಯೊಂದಿಗೆ ಮುಗಿಯುವುದಿಲ್ಲ’

‘ದಿ ನ್ಯೂಸ್ ಮಿನಿಟ್’ ಸಂಪಾದಕಿ ಧನ್ಯಾ ರಾಜೇಂದ್ರನ್ ಮಾತನಾಡಿ, ಇಂತಹ ಪ್ರಕರಣಗಳನ್ನು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸಂಘರ್ಷವಾಗಿ ನೋಡಬಾರದು. ಹಲವು ಸಂದರ್ಭಗಳಲ್ಲಿ ಇದು ವ್ಯಕ್ತಿ ಮತ್ತು ವ್ಯವಸ್ಥೆಯ ನಡುವಿನ ಸಂಘರ್ಷವಾಗಿರುತ್ತದೆ ಎಂದು ಹೇಳಿದರು.

ಮಾಧ್ಯಮಗಳು ಇಂತಹ ಪ್ರಕರಣಗಳನ್ನು ವರದಿ ಮಾಡುವಾಗ ಹೊಣೆಗಾರಿಕೆಯ ಪ್ರಶ್ನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಿಸ್ಟರ್ ರಾಣಿತ್ ಪ್ರಕರಣ ಹಾಗೂ ಧರ್ಮಸ್ಥಳ ಪ್ರಕರಣಗಳಲ್ಲಿ ತಮ್ಮ ಸಂಸ್ಥೆ ನಿರಂತರವಾಗಿ ವರದಿ ಮಾಡಿರುವುದನ್ನು ಅವರು ವಿವರಿಸಿದರು.

ಹೊಣೆಗಾರಿಕೆ ಎಂದರೆ ಆರೋಪಿ ಖುಲಾಸೆಯಾಗುವುದರಿಂದ ಅಥವಾ ದೋಷಿ ಎಂದು ಸಾಬೀತಾಗುವುದರಿಂದ ಮುಗಿಯುವ ವಿಚಾರವಲ್ಲ; ಅದು ನಿರಂತರ ಪ್ರಕ್ರಿಯೆ ಎಂದು ಧನ್ಯಾ ರಾಜೇಂದ್ರನ್ ಹೇಳಿದರು. ಬದಲಾವಣೆ ತಕ್ಷಣ ಆಗದಿದ್ದರೂ ಬದಲಾವಣೆಗಾಗಿ ಪ್ರಯತ್ನ ಮುಂದುವರಿಸಬೇಕು ಎಂದು ಅಭಿಪ್ರಾಯಪಟ್ಟರು.

ಪೊಲೀಸ್ ವ್ಯವಸ್ಥೆಯ ಮನೋಭಾವದ ಬಗ್ಗೆಯೂ ಪ್ರಶ್ನೆ

ವಕೀಲೆ ಪೂರ್ಣಾ ರವಿಶಂಕರ್ ಅವರು ಪ್ರಗತಿಪರ ಚರ್ಚೆಗಳು ನಡೆಯುವ ವೇದಿಕೆಗಳು ಮತ್ತು ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಾಣಿಸಿಕೊಳ್ಳುವ ಕೆಲವು ಮನೋಭಾವಗಳ ನಡುವಿನ ಅಂತರವನ್ನು ಪ್ರಸ್ತಾಪಿಸಿದರು.

ಪೊಲೀಸ್ ಜಾಗೃತಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ, ಮಹಿಳೆಯರನ್ನು ಖರೀದಿಸಿ, ಬಳಸಿಕೊಂಡು ಹಾಗೂ ಮೌಲ್ಯಮಾಪನ ಮಾಡುವ ವಸ್ತುಗಳಂತೆ ನೋಡುವ ಮನೋಭಾವ ಹೊಂದಿರುವ ಕೆಲವು ಪೊಲೀಸ್ ಸಿಬ್ಬಂದಿಯನ್ನು ತಾವು ಕಂಡಿರುವುದಾಗಿ ಅವರು ಹೇಳಿದರು.

ಇಂತಹ ಮನೋಭಾವ ಬದಲಾಗದೆ ಮಹಿಳೆಯರಿಗೆ ನ್ಯಾಯ ಒದಗಿಸುವ ವ್ಯವಸ್ಥೆ ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂಬ ವಿಚಾರವನ್ನು ಅವರು ಒತ್ತಿ ಹೇಳಿದರು.

ದೂರು ದಾಖಲಿಸುವುದೇ ಒಂದು ಪ್ರತಿರೋಧ: ಡಾ. ಆಶಾ

ವುಮೆನ್ ಅಂಡ್ ಸಿನಿಮಾ ಕಲೆಕ್ಟಿವ್‌ನ ಡಾ. ಆಶಾ ಅಚ್ಯು ಜೋಸೆಫ್ ಅವರು ಮಾತನಾಡಿ, ಪಿತೃಪ್ರಧಾನ ಸಮಾಜದಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ವ್ಯಕ್ತಿಯೊಬ್ಬರು ದೂರು ದಾಖಲಿಸುವುದೇ ಒಂದು ರೀತಿಯ ಪ್ರತಿರೋಧ ಎಂದು ಹೇಳಿದರು.

ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಮಹಿಳೆಯರು ಸಂಘಟಿತರಾಗಿ ಮಾತನಾಡಲು ಆರಂಭಿಸಿದ ಸಂದರ್ಭವನ್ನು ಅವರು ವಿವರಿಸಿದರು. ಸಹೋದ್ಯೋಗಿ ಭಾವನಾ ಪ್ರಕರಣವನ್ನು ಉಲ್ಲೇಖಿಸಿದ ಅವರು, ಸಂತ್ರಸ್ತೆಗೆ ದೊರೆತ ಬೆಂಬಲವು ಆಕೆ ತನ್ನ ಅನುಭವದ ವಿರುದ್ಧ ಧ್ವನಿ ಎತ್ತಲು ಪ್ರಮುಖ ಕಾರಣವಾಯಿತು ಎಂದು ಹೇಳಿದರು.

More articles

Latest article

Most read