ಸಿಇಸಿ ರಾಜೀನಾಮೆಗೆ CJP ಒತ್ತಾಯ : ಅ.10ಕ್ಕೆ ‘ಚಲೋ ದೆಹಲಿ’ ಕರೆ

ಮುಂಬೈ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಶುಕ್ರವಾರ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ.

ಗಾಂಧಿ ಜಯಂತಿಯಂದು ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಶಿವಾಜಿ ಪಾರ್ಕ್‌ನಲ್ಲಿ ಜಮಾಯಿಸಿದ್ದರು. ಯುವ ಪ್ರತಿಭಟನಾಕಾರರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು, ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸುವ ಫಲಕಗಳನ್ನು ಪ್ರದರ್ಶಿಸಿದರು.

ದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಹಿಂದಿನ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಮುಂಬೈನಲ್ಲಿ ಈ ಹೋರಾಟ ಆಯೋಜಿಸಲಾಗಿತ್ತು.

ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ

ಪ್ರತಿಭಟನೆಗೆ ಮುಂಬೈ ಪೊಲೀಸರು ಅನುಮತಿ ನೀಡಿರಲಿಲ್ಲ. ಶಬ್ದ ಮಾಲಿನ್ಯ ಮತ್ತು ಸಂಚಾರದ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನು ಮುಂದಿಟ್ಟುಕೊಂಡು ಪ್ರತಿಭಟನಾಕಾರರನ್ನು ಶಿವಾಜಿ ಪಾರ್ಕ್‌ನಲ್ಲಿ ಸೇರುವುದನ್ನು ತಡೆಯಲು ಪೊಲೀಸರು ಪ್ರಯತ್ನಿಸಿದ್ದರು.

ಆದರೆ ಭಾರೀ ಪೊಲೀಸ್ ಬಂದೋಬಸ್ತ್ ನಡುವೆಯೂ CJP ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದರು.

‘ರಾಜೀನಾಮೆ ನೀಡದಿದ್ದರೆ ಅ.10ಕ್ಕೆ ದೆಹಲಿಗೆ’

CJP ಸಂಸ್ಥಾಪಕ ಅಭಿಜೀತ್ ದಿಪ್ಕೆ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

“ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತದ ‘ಕಾಕ್ರೋಚ್‌ಗಳು’ ದೆಹಲಿಗೆ ತೆರಳಿ ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿವೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಮುಂದಾದರೂ, ಎಲ್ಲಿ ತಡೆಯಲಾಗುತ್ತದೆಯೋ ಆ ಸ್ಥಳವನ್ನೇ ‘ನಮ್ಮ ಜಂತರ್ ಮಂತರ್’ ಆಗಿ ಪರಿವರ್ತಿಸುತ್ತೇವೆ ಎಂದು ದಿಪ್ಕೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಪ್ರತಿಭಟನೆ ಶಾಂತಿಯುತವಾಗಿರಲಿದೆ. ಮಹಾತ್ಮ ಗಾಂಧಿ ತೋರಿದ ಮಾರ್ಗದಲ್ಲೇ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

‘ಜೈಲು ಭರೋ ಆಂದೋಲನ’ದ ಎಚ್ಚರಿಕೆ

ಇದಕ್ಕೂ ಮುನ್ನ ಪ್ರತಿಭಟನೆಗೆ ತಡೆಯೊಡ್ಡಿದರೆ ‘ಜೈಲು ಭರೋ ಆಂದೋಲನ’ ನಡೆಸುವುದಾಗಿ ದಿಪ್ಕೆ ಎಚ್ಚರಿಸಿದ್ದರು.

ಶಿವಾಜಿ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತದ ಯುವಜನತೆ ದೆಹಲಿಯತ್ತ ಮುಖ ಮಾಡಲಿದೆ ಎಂದು ಹೇಳಿದರು.

ದೆಹಲಿ ಪೊಲೀಸರ ವಿರುದ್ಧವೂ ಆಕ್ರೋಶ

ಮುಂಬೈ ಪೊಲೀಸರ ಸಹಕಾರವನ್ನು ಶ್ಲಾಘಿಸಿದ ದಿಪ್ಕೆ, ದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಹಿಂದಿನ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರನ್ನು ನಡೆಸಿಕೊಂಡ ರೀತಿಗೆ ದೆಹಲಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

“ಇಂದು ಸಹಕಾರ ನೀಡಿದ ಮುಂಬೈ ಪೊಲೀಸರಿಗೆ ಧನ್ಯವಾದ. ಕರ್ತವ್ಯದಲ್ಲಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಸಲಾಂ. ದೆಹಲಿ ಪೊಲೀಸರು ಮುಂಬೈ ಪೊಲೀಸರಿಂದ ಕಲಿಯಬೇಕು” ಎಂದು ಅವರು ಹೇಳಿದರು.

CJP ಮುಖಂಡ ಸೌರವ್ ದಾಸ್ ಕೂಡ ದೆಹಲಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು. ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕ್ರಮವನ್ನು ಅವರು ಖಂಡಿಸಿದ್ದು, ಪೊಲೀಸರು ತಮ್ಮ ವರ್ತನೆಯನ್ನು ಬದಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

SIR ವಿಚಾರದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ಇದೀಗ ಮುಂಬೈನಿಂದ ಮತ್ತೆ ದೆಹಲಿಯತ್ತ ಸಾಗುವ ಸೂಚನೆ ನೀಡಿದ್ದು, ಅಕ್ಟೋಬರ್ 10ರ ‘ಚಲೋ ದೆಹಲಿ’ ಹೋರಾಟದತ್ತ ಗಮನ ನೆಟ್ಟಿದೆ.

More articles

Latest article

Most read