“ಗಾಂಧಿ ನಾಯಕತ್ವ – ಇಂದಿನ ಪ್ರಜ್ಞಾವಂತರಿಗೆ ದಾರಿದೀಪ” : ಸಿ ಎಸ್ ವೆಂಕಟೇಶ್ ಅಭಿಮತ

ಮಂಡ್ಯ : ಪ್ರಜ್ಞಾವಂತ ಎಂದರೆ ಕೇವಲ ಬುದ್ಧಿವಂತರ ವೇದಿಕೆಯಲ್ಲ, ಪ್ರಜ್ಞೆ ಇರುವವರ ವೇದಿಕೆ. ಪ್ರಜ್ಞೆ ಎಂದರೆ ಏನು? ನಾಳೆ ಏನಾಗುತ್ತದೆ ಎಂದು ಇಂದೇ ಯೋಚಿಸುವ ಶಕ್ತಿ. ಗಾಂಧೀಜಿ ಈ ಪ್ರಜ್ಞೆಯ ನಾಯಕ.ಇಂದು ದೇಶದಲ್ಲಿ ನಾಯಕರಿಗೆ ಕೊರತೆಯಿಲ್ಲ, ನಾಯಕತ್ವಕ್ಕೆ ಕೊರತೆಯಿದೆ. ಎಲ್ಲರೂ ನಾಯಕರಾಗಲು ಬಯಸುತ್ತಾರೆ, ಯಾರೂ ಸೇವಕರಾಗಲು ಬಯಸುವುದಿಲ್ಲ. ಈ ಸಂದರ್ಭದಲ್ಲಿ ಗಾಂಧಿ ನಾಯಕತ್ವವನ್ನು ನಾವು ಮತ್ತೆ ಓದಬೇಕಿದೆಎಂದು ಪ್ರಜ್ಞಾವಂತ ವೇದಿಕೆ ಸಂಚಾಲಕರಾದ ಸಿ ಎಸ್ ವೆಂಕಟೇಶ್ ಹೇಳಿದ್ದಾರೆ.

ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯಲ್ಲಿ ಗಾಂಧಿ ಚಿತಾಭಸ್ಮ ವಿಸರ್ಜನಾ ಸ್ಥಳದಲ್ಲಿ ಸಮರ್ಪಣ ಟ್ರಸ್ಟ್,ರಂಗನಾಯಕಿ ಸ್ತ್ರೀ ಸಮಾಜ, ಪ್ರಜ್ಞಾವಂತ ವೇದಿಕೆ ಸಹಯೋಗದೊಂದಿಗೆಗಾಂಧಿ ಜಯಂತಿ ಆಚರಿಸಿ ಮಾತನಾಡಿದರು. . ನಾವೆಲ್ಲರೂ ನೋಡಿದ್ದೇವೆ, ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧಿ ಮುಂದೆ ನಡೆದರು. ಆದರೆ ಅದಕ್ಕಿಂತ ಮುಖ್ಯವಾದದ್ದು ಅವರು ಯಾವಾಗಲೂ ಕೊನೆಯ ಮನುಷ್ಯನ ಬಗ್ಗೆ ಯೋಚಿಸಿದರು. ಅವರಿಗೆ ಅಂತ್ಯೋದಯ ಮುಖ್ಯವಾಗಿತ್ತು.ಇಂದಿನ ನಾಯಕತ್ವ ಹೇಗಿದೆ? ಮೊದಲು ನಾನು, ನನ್ನ ಕುಟುಂಬ, ನನ್ನ ಪಕ್ಷ. ಗಾಂಧಿ ನಾಯಕತ್ವ ಹೇಳುತ್ತದೆ ಮೊದಲು ದೇಶದ ಕೊನೆಯ ಮನುಷ್ಯ ಎಂದರು.

ಶ್ರೀರಂಗನಾಯಕಿ ಸ್ತ್ರೀ ಸಮಾಜ ಅಧ್ಯಕ್ಷೆ ವಿಶಾಲಾಕ್ಷಿ ಪದ್ಮನಾಭ ಮಾತನಾಡಿ, ಗಾಂಧೀಜಿಯವರಿಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿತ್ತು. ದಕ್ಷಿಣ ಆಫ್ರಿಕಾದ ಸತ್ಯಾಗ್ರಹದಲ್ಲಿ, ಬೋರ್ಸಾದ್ ಸತ್ಯಾಗ್ರಹದಲ್ಲಿ ರಕ್ತ ಸುರಿದು ಲಾಠಿ ಏಟು ತಿಂದವರು ನಮ್ಮಂತಹ ಸಾಮಾನ್ಯ ಹೆಣ್ಣುಮಕ್ಕಳೇ.
ಗಾಂಧೀಜಿ 1934ರಲ್ಲಿ ಬದನವಾಳು, ತಗಡೂರಿಗೆ ಬಂದಾಗ ಹೆಣ್ಣುಮಕ್ಕಳನ್ನೇ ಮೊದಲು ಮಾತನಾಡಿಸಿದ್ದರು. “ನಾವೆಲ್ಲರೂ ಹರಿಜನರು, ನಾವೆಲ್ಲರೂ ದೇವರ ಮಕ್ಕಳು” ಎಂದು ಅವರು ಹೇಳಿದರು.ಇಂದು ಪಶ್ಚಿಮವಾಹಿನಿಯ ಈ ಪವಿತ್ರ ಸ್ಥಳದಲ್ಲಿ ನಿಂತು ನಾನು ಒಂದು ಪ್ರಶ್ನೆ ಕೇಳುತ್ತೇನೆ ಗಾಂಧೀಜಿಯವರ ಚಿತಾಭಸ್ಮ ಕಾವೇರಿಯಲ್ಲಿ ಲೀನವಾಯಿತು. ಆ ಕಾವೇರಿ ತಾಯಿಯನ್ನು ನಾವು ಇಂದು ಎಷ್ಟು ಸ್ವಚ್ಛವಾಗಿಟ್ಟಿದ್ದೇವೆ? ನದಿ ನೀರಿಗೆ ಪ್ಲಾಸ್ಟಿಕ್, ಕೆಮಿಕಲ್ಸ್ ಸೇರಿಸಿ ಆಗುತ್ತಿರುವ ನದಿ ನೀರುಮಾಲಿನ್ಯ ನಿಷೇಧಿಸಬೇಕು ಎಂದರು.

ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್ ಮಾತನಾಡಿ.ಗಾಂಧೀಜಿ ಬ್ಯಾರಿಸ್ಟರ್ ಆಗಿದ್ದಾಗ ಸಾಮಾನ್ಯರಾಗಿದ್ದರು. 1893ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷರ ಜನಾಂಗೀಯ ನೀತಿಯಿಂದ ಅವರನ್ನು ಪ್ರಥಮ ದರ್ಜೆ ಬೋಗಿಯಿಂದ ದೂಡಿದಾಗ, ಆ ಒಂದು ಅವಮಾನವೇ ಭಾರತದ ಸ್ವಾಭಿಮಾನವನ್ನು ಕೆರಳಿಸಿತು. ಅವರು ಅದನ್ನು ವೈಯಕ್ತಿಕ ಸೇಡಾಗಿಸದೆ, ಕೋಟಿ ಭಾರತೀಯರ ಅವಮಾನವೆಂದು ಭಾವಿಸಿದರು. ಸತ್ಯ, ಅಹಿಂಸೆ, ಖಾದಿಯೇ ಅಸ್ತ್ರವಾಯಿತು. ಬಡವರ ಗುಡಿಸಲಿಗೆ ಹೋದರು, ಕೊನೆಯ ಮನುಷ್ಯನಿಗಾಗಿ ಹೋರಾಡಿದರು. ಅದೇ ಸತ್ಯಾಗ್ರಹವಾಯಿತು, ಅದೇ ಸ್ವಾತಂತ್ರ್ಯವಾಯಿತು. ಜನರೇ ಅವರನ್ನು ಮಹಾತ್ಮ ಎಂದರು. ಅವಮಾನವನ್ನು ಸ್ವಾಭಿಮಾನವನ್ನಾಗಿ ಪರಿವರ್ತಿಸುವುದೇ ನಿಜವಾದ ಗಾಂಧಿ ಪಾಠ ಎಂದರು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ಪುರಸಭಾ ಮಾಜಿ ಅಧ್ಯಕ್ಷೆ ಶೀಲಾ ನಂಜುಂಡಯ್ಯಾ, ರಂಗನಾಯಕಿ ಸ್ತ್ರೀ ಸಮಾಜ ಸದಸ್ಯೆ ಮೀರಾ, ಇಂದ್ರಮ್ಮ, ಸುಧಾ, ಸುಜಾತ ಅರಸ್, ಚಿಕ್ಕ ತಮ್ಮೇಗೌಡ ಮುಂತಾದವರು ಭಾಗವಹಿಸಿದ್ದರು.

More articles

Latest article

Most read