ವಿಮಾನದಲ್ಲಿ ಪೈಲಟ್‌ ಮೇಲೆ ಕೋ-ಪೈಲಟ್‌ ದಾಳಿ; ಚುರುಕಾದ ತನಿಖೆ

ದುಬೈ/ಟೆಲ್‌ ಅವೀವ್: ಅ.2 ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈ ದುಬೈ ವಿಮಾನದಲ್ಲಿ ನಡೆದ ಆತಂಕಕಾರಿ ಘಟನೆಯ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ವಿಮಾನದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ದಾಳಿ ನಡೆಸಿದ ಆರೋಪ ಎದುರಿಸುತ್ತಿರುವ ಒಮಾನ್ ಮೂಲದ ಕೋ-ಪೈಲಟ್‌ನನ್ನು ಸೌದಿ ಅರೇಬಿಯಾ ಇದೀಗ ಯುಎಇ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಘಟನೆಯಲ್ಲಿ ಭಯೋತ್ಪಾದಕ ಚಟುವಟಿಕೆ ಅಥವಾ ಪೂರ್ವನಿಯೋಜಿತ ಸಂಚು ಇದೆಯೇ ಎಂಬುದನ್ನೂ ಯುಎಇ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದೇ ವೇಳೆ, ಗಾಯಗೊಂಡಿದ್ದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಸೌದಿ ಅರೇಬಿಯಾದ ತಬೂಕ್‌ನಿಂದ ಅಬುಧಾಬಿಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅಬುಧಾಬಿ ಆಸ್ಪತ್ರೆಗೆ ದಾಖಲಾಗಿರುವ ಮಚ್ಚರ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೀಡಿಯೊ ಕಾಲ್‌ನಲ್ಲಿ ಮಾತನಾಡಿದ್ದು, ಘಟನೆ ನಡೆದ ಕ್ಷಣಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಏನಾಗಿತ್ತು ವಿಮಾನದಲ್ಲಿ?
ಸೆಪ್ಟೆಂಬರ್ 30ರಂದು ಫ್ಲೈ ದುಬೈ FZ1073 ವಿಮಾನ ದುಬೈಯಿಂದ ಟೆಲ್ ಅವೀವ್‌ಗೆ ಹೊರಟಿತ್ತು. ಬೋಯಿಂಗ್ 737 MAX 8 ವಿಮಾನದಲ್ಲಿ ಸುಮಾರು 180ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.

ವಿಮಾನ ಸುಮಾರು 34,000 ಅಡಿ ಎತ್ತರದಲ್ಲಿ ಸಾಗುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್ ಮತ್ತು ಕೋ-ಪೈಲಟ್ ನಡುವೆ ಗಂಭೀರ ಘರ್ಷಣೆ ನಡೆದಿದೆ. ಸೌದಿ ಅರೇಬಿಯಾದ ಪ್ರಾಥಮಿಕ ತನಿಖೆಯ ಪ್ರಕಾರ, ಕೋ-ಪೈಲಟ್ ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ಘಟನೆಯ ಬಳಿಕ ವಿಮಾನದ ಎತ್ತರದಲ್ಲಿ ತೀವ್ರ ಬದಲಾವಣೆ ಕಂಡುಬಂದಿದೆ. ವಿಮಾನ ಕೆಲವೇ ಕ್ಷಣಗಳಲ್ಲಿ ಸುಮಾರು 14,000 ಅಡಿ ಎತ್ತರ ಕಳೆದುಕೊಂಡಿದೆ. ತುರ್ತು ಪರಿಸ್ಥಿತಿಯನ್ನು ಸೂಚಿಸುವ 7700 ಹಾಗೂ ನಂತರ ವಿಮಾನದಲ್ಲಿ ಅಕ್ರಮ ಹಸ್ತಕ್ಷೇಪವನ್ನು ಸೂಚಿಸುವ 7500 squawk ಕೋಡ್‌ಗಳನ್ನು ವಿಮಾನದಿಂದ ಪ್ರಸಾರ ಮಾಡಲಾಗಿದೆ ಎಂದು ವರದಿಯಾಗಿದೆ.

ಪ್ರಯಾಣಿಕರ ಮಧ್ಯಪ್ರವೇಶ

ಘಟನೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿದ್ದಾರೆ. ಗಾಯಗೊಂಡಿದ್ದರೂ ಕ್ಯಾಪ್ಟನ್ ಮಚ್ಚರ್ ಮತ್ತೆ ವಿಮಾನದ ನಿಯಂತ್ರಣ ಪಡೆಯಲು ಪ್ರಯತ್ನಿಸಿದ್ದಾರೆ. ಪ್ರಯಾಣಿಕರ ನೆರವಿನಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತು.

ಸೌದಿ ತನಿಖೆಯ ಮೊದಲ ವರದಿ ಏನು ಹೇಳುತ್ತದೆ?

ಸೌದಿ ಅರೇಬಿಯಾದ ಗೃಹ ಸಚಿವಾಲಯದ ಪ್ರಾಥಮಿಕ ತನಿಖೆಯಲ್ಲಿ, “ಪೈಲಟ್‌ ಮೇಲೆ ಕೋ-ಪೈಲಟ್‌ನಿಂದ ದಾಳಿ ನಡೆದಿದೆ, ಪರಿಣಾಮವಾಗಿ ಇಬ್ಬರಿಗೂ ಗಾಯಗಳಾಗಿವೆ” ಎಂದು ತಿಳಿಸಲಾಗಿದೆ.

ಗುರುವಾರ ಇಬ್ಬರು ಪೈಲಟ್‌ಗಳ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಅವರನ್ನು UAEಗೆ ಕಳುಹಿಸಲಾಗಿದೆ. ಸೌದಿ ತನಿಖೆಗೆ UAE ಭದ್ರತಾ ತಂಡವೂ ಸಹಕರಿಸಿದೆ.

ಕೋ-ಪೈಲಟ್‌ನ ಉದ್ದೇಶವೇನು?
ಕೋ-ಪೈಲಟ್‌ನ ಹೆಸರು ಅಧಿಕೃತವಾಗಿ ಬಹಿರಂಗವಾಗಿಲ್ಲ. ಇಸ್ರೇಲಿ ಅಧಿಕಾರಿಗಳು ಆತ ಒಮಾನ್‌ನ ಪ್ರಜೆ ಎಂದು ಹೇಳಿದ್ದಾರೆ. ಆದರೆ ಫ್ಲೈ ದುಬೈ, ಯುಎಇ ಮತ್ತು ಒಮಾನ್ ಅಧಿಕಾರಿಗಳಿಂದ ಈ ಗುರುತು/ರಾಷ್ಟ್ರೀಯತೆಯ ಕುರಿತು ಸಂಪೂರ್ಣ ಅಧಿಕೃತ ವಿವರ ಇನ್ನೂ ಪ್ರಕಟವಾಗಿಲ್ಲ.

ಘಟನೆಯ ಹಿಂದೆ ಭಯೋತ್ಪಾದಕ ಉದ್ದೇಶ, ಪೂರ್ವನಿಯೋಜಿತ ಸಂಚು ಅಥವಾ ಬೇರೆ ಕಾರಣವಿದೆಯೇ ಎಂಬುದನ್ನು ಯುಎಇ ವಿಶೇಷ ತನಿಖಾ ತಂಡ ಪರಿಶೀಲಿಸುತ್ತಿದೆ. ಯುಎಇ ಅಟಾರ್ನಿ ಜನರಲ್ ಈ ಬಗ್ಗೆ ವಿಶೇಷ ತನಿಖೆಗೆ ಆದೇಶಿಸಿದ್ದಾರೆ.

ಸ್ಮಿತ್ ಮಚ್ಚರ್‌ ಆರೋಗ್ಯ ಸ್ಥಿರ
ಭಾರತದ ವಿದೇಶಾಂಗ ಸಚಿವಾಲಯವು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಆರೋಗ್ಯದ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದೆ. ತಬೂಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಅಬುಧಾಬಿಗೆ ಸ್ಥಳಾಂತರಿಸಲಾಗಿದೆ. ಯುಎಇಯಲ್ಲಿರುವ ಭಾರತೀಯ ರಾಯಭಾರಿಯೂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಫ್ಲೈ ದುಬೈ ಇಸ್ರೇಲ್‌ಗೆ ತನ್ನ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಘಟನೆಗೆ ಸಂಬಂಧಿಸಿದ ತನಿಖೆ ಮುಂದುವರಿದಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

More articles

Latest article

Most read