ಮುಂದಿನ ಎರಡು ಮೂರು ದಿನ ನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ; ಕಂಟ್ರೋಲ್ ರೂಂ 24ಗಂಟೆಯೂ ಕಾರ್ಯ ನಿರ್ವಹಿಸಲು ಸೂಚನೆ : ಕೃಷ್ಣ ಬೈರೇಗೌಡ

ಪಶ್ಚಿಮ-ಉತ್ತರ ಬೆಂಗಳೂರಿನಲ್ಲಿ ಅಧಿಕ ಮಳೆ ಸಾಧ್ಯತೆ

ಬೆಂಗಳೂರು ಸೆ. 30 : ಮುಂದಿನ ಎರಡು ಮೂರು ದಿನ ನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಅನಾಹುತಗಳು ಜರುಗುವ ಮುನ್ನ ಮುನ್ನೆಚ್ಚರಿಕೆ ವಹಿಸಿ ಎಂದು ಎಲ್ಲಾ ಅಧಿಕಾರಿಗಳಿಗೂ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.

ಐದೂ ಪಾಲಿಕೆ ಆಯುಕ್ತರು ಮುಖ್ಯ ಆಯುಕ್ತರು ಹಾಗೂ ಸಂಬಂಧಿತ ಅಧಿಕಾರಿಗಳ ಜೊತೆ ಬುಧವಾರ ಸಂಜೆ ವರ್ಚುವಲ್ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಪಶ್ಚಿಮ, ಉತ್ತರ, ಪೂರ್ವ ಹಾಗೂ ಕೇಂದ್ರ ವಲಯದಲ್ಲಿ ಮುಂದಿನ ಎರಡು ಮೂರು ದಿನ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿವರ್ಹಣಾ ಪ್ರಾಧಿಕಾರ ಎಚ್ಚರಿಕೆ ನೀಡಿದ್ದು ಅಧಿಕಾರಿಗಳು ಮಳೆಯಿಂದ ಯಾವುದೇ ಅನಾಹುತ ಜರುಗುವ ಮುನ್ನ ಎಚ್ಚರಿಕೆ ವಹಿಸಬೇಕು, ಮುಂಜಾಗ್ರತಾ ಕ್ರಮಗಳನ್ನು ಜರುಗಿಸಬೇಕು ಎಂದು ನಿರ್ದೇಶಿಸಿದರು.

ಪಶ್ಚಿಮ ಮತ್ತು ಉತ್ತರ ಬೆಂಗಳೂರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಹರಿ ವಾಹನ ತಂಡ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು, ನಗರದಾದ್ಯಂತ ರೌಂಡ್ಸ್ ಹಾಕಬೇಕು. ಎಲ್ಲೇ ಅಗತ್ಯ ಇದ್ದರೂ ಈ ತಂಡ ತಕ್ಷಣ ಸಹಾಯಕ್ಕೆ ನೆರವಾಗುವಂತಿರಬೇಕು ಎಂದು ತಿಳಿಸಿದರು.

ಕಂಟ್ರೋಲ್ ರೂಂ ಜಾಗೃತವಾಗಿರಲಿ :  ಮಳೆ ಸಂದರ್ಭದಲ್ಲಿ ಕಂಟ್ರೋಲ್ ರೂಂ ದಿನದ 24 ಗಂಟೆಯೂ ಜಾಗೃತವಾಗಿರಬೇಕು. ನಗರದ ಯಾವುದೇ ಭಾಗದಿಂದ ದೂರುಗಳು ಬಂದರೂ ಸಹ ಕೂಡಲೇ ಸ್ಪಂದಿಸಬೇಕು. ಮಳೆಯಿಂದ ಹೆಚ್ಚು ನೀರು ನಿಲ್ಲಬಹುದಾದ ಪ್ರದೇಶಗಳಲ್ಲಿ ನೀರನ್ನು ಹೊರಗೆ ಹರಿಸುವ ಪಂಪಿಂಗ್ ವ್ಯವಸ್ಥೆಗೆ ಮೋಟರ್ ಗಳು ಸಿದ್ದವಾಗಿರಬೇಕು. ಮರಗಳು ಉರುಳಿದರೆ ಅದನ್ನು ಕತ್ತರಿಸಲು ಅಗತ್ಯ ಮಾನವ ಸಂಪನ್ಮೂಲ ಹಾಗೂ ಜೆಸಿಬಿ ಗಳ ಲಭ್ಯತೆ ಬಗ್ಗೆ ಈಗಲೇ ಖಚಿತಪಡಿಸಿಕೊಳ್ಳಿ. ಅಲ್ಲದೆ, ಯಾವುದೇ ಪರಿಸ್ಥಿತಿಯನ್ನು ನಿಬಾಯಿಸಲು ಜಿಬಿಎ ವ್ಯಾಪ್ತಿಯ ಇಂಜಿನಿಯರ್ ಗಳು ಹಾಗೂ ಅಗ್ನಿಶಾಮಕ ದಳ ಸರ್ವ ಸನ್ನದ್ಧರಾಗಿರಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು.

More articles

Latest article

Most read