ಬೆಂಗಳೂರು : ಕೆಂಗೇರಿ ಆನೆದಾಳಿಗೆ 60 ವರ್ಷದ ನಾಗರಾಜ್ ಎಂಬುವರು ಆನೆ ದಾಳಿಗೆ ಬಲಿಯಾಗಿದ್ದಾರೆ.
ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗ ಅಂಚೆಪಾಳ್ಯದಲ್ಲಿ ನಡೆದಿರುವ ಘಟನೆ ಇದು, ಮೈಸೂರು ರಸ್ತೆಯಲ್ಲಿರುವಂತಹ ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗದಲ್ಲಿ ಇವತ್ತು ಬೆಳಗ್ಗೆ ವಾಕಿಂಗ್ಗೆ ಬೆಳಗ್ಗೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸುಮಾರು ಐದುವರೆ ಸಮಯ ವಾಕಿಂಗ್ ಮಾಡುತ್ತಿದ್ದಾಗೆ ನಾಗರಾಜ ಮೇಲೆ ಕಾಡಾನೆದಾಳಿ ಮಾಡಿದೆ. ಆನೆ ದಾಳಿಯಿಂದ ಗಾಯಿಗೊಂಡಿದ್ದ ನಾಗರಾಜ ಅವರನ್ನ ಕೂಡಲೇ ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹತ್ತಿರದಲ್ಲೇ ಬನ್ನೇರುಘಟ್ಟ ಅರಣ್ಯ ವಲಯ ಇದೆ. ಹಾಗಾಗಿ ಅಂಚೆಪಾಳ್ಯ ಸಮೀಪಕ್ಕೆ ಈ ಅರಣ್ಯ ವಲಯ ಇರೋದ್ರಿಂದಾಗಿ ಆನೆ ಅಲ್ಲಿಂದ ಬಂದಿರುವಂತಹ ಸಾಧ್ಯತೆಗಳು ಇದೆ.

