ಸೌಜನ್ಯ ಪ್ರಕರಣ : ವೈರಲ್ ಆಯ್ತು ಅಜಿತ್ ಹನುಮಕ್ಕನವರ್ – SIT ಮುಖ್ಯಸ್ಥರ ಫೋಟೋ

ಬೆಂಗಳೂರು : ರಾಜ್ಯ ಸರ್ಕಾರ IGP ಶಶಿಕುಮಾರ್ ನೇತೃತ್ವದಲ್ಲಿ ಸೌಜನ್ಯ ಪ್ರಕರಣ ತನಿಖೆಗೆ SIT ರಚನೆ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ನಿರೂಪಕ ಅಜಿತ್ ಹನುಮಕ್ಕನವರ್ ಅವರೊಂದಿಗೆ SIT ಮುಖ್ಯಸ್ಥರು ಕುಳಿತುಕೊಂಡಿರುವ ಫೋಟೋ ಒಂದು ವೈರಲ್ ಆಗುತ್ತಿದೆ.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಜೊತೆಯಲ್ಲಿ ಐಪಿಎಸ್ ಅಧಿಕಾರಿ ಶಶಿಕುಮಾರ್, ಟಿವಿ ನಿರೂಪಕ ಅಜಿತ್ ಹನುಮಕ್ಕನವರ್ ಮತ್ತು ಇನ್ನಿಬ್ಬರು ವ್ಯಕ್ತಿಗಳು ಗಂಭೀರವಾಗಿ ಚರ್ಚಿಸುತ್ತಿರುವ ಚಿತ್ರ ಇದಾಗಿದ್ದು, ಶಶಿಕುಮಾರ್ ಅವರು ಅಜಿತ್ ಅವರಿಗೆ ಏನೋ ಹೇಳುತ್ತಿರುವುದು ಕಾಣಿಸುತ್ತದೆ.

ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಉಪಾಹಾರಕ್ಕೆ ಸೇರುವುದರಲ್ಲಿ ಯಾವುದೇ ವಿಶೇಷ ಇಲ್ಲ ಎಂಬುದು ನಿಜ. ಆದರೆ ಸೌಜನ್ಯ ಪ್ರಕರಣದ ಕುರಿತು ಅಜಿತ್ ಹನುಮಕ್ಕನವರ್ ಪತ್ರಕರ್ತನ ವ್ಯಾಪ್ತಿ ಮೀರಿ ತಾವೇ ಸ್ವತಃ ಪರ್ಯಾಯ ತನಿಖೆ ಮಾಡಿದ್ದಾಗಿ ಹೇಳಿಕೊಂಡಿದ್ದರು. ಹೀಗಾಗಿ ಸೌಜನ್ಯ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ಶಶಿ ಕುಮಾರ್ ಅವರು ಅಜಿತ್ ಜೊತೆ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣ ಬಳಕೆದಾರರ ಹುಬ್ಬೇರಿಸುವಂತೆ ಮಾಡಿದೆ.

ಸೌಜನ್ಯ ಪ್ರಕರಣದ ಕುರಿತು ತಾವು ತ್ರೆಡ್ ಬೇರ್ ತನಿಖೆ ಮಾಡಿರುವುದಾಗಿ ಹೇಳಿಕೊಂಡಿದ್ದ ಅಜಿತ್, ಪೊಲೀಸ್-CID-CBI ತನಿಖೆಯಲ್ಲಿ ಯಾರನ್ನು ಅಪರಾಧಿ ಎಂದು ಗುರುತಿಸಲಾಗಿದೆಯೋ ಅದೇ ಸತ್ಯ ಎಂದು ಪ್ರತಿಪಾದಿಸಿದ್ದರು. ಖುಲಾಸೆಯಾಗಿರುವ ನಿರಪರಾಧಿ ಸಂತೋಷ್ ರಾವ್ ಅವರೇ ಕೃತ್ಯ ಎಸಗಿದ್ದಾರೆ ಎಂದು ಪದೇಪದೇ ಹೇಳುತ್ತಾ ಬಂದಿದ್ದರು. ಇದು ಸೌಜನ್ಯ ಹೋರಾಟಗಾರರ ಕಟುಟೀಕೆಗೆ ಒಳಗಾಗಿತ್ತು.

ಸೌಜನ್ಯ ಪ್ರಕರಣ ಮಾರುತನಿಖೆಗೆ ಅದೇಶಿಸಿರುವ ಸುಪ್ರೀಂ ಕೋರ್ಟ್ ತನಿಖಾ ತಂಡ ಈಗಾಗಲೇ ನಿರ್ದೋಷಿ ಎಂದು ತೀರ್ಮಾನವಾಗಿರುವ ಸಂತೋಷ್ ರಾವ್ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವಂತಿಲ್ಲ ಎಂದು ಹೇಳಿರುವುದನ್ನು ಸ್ಮರಿಸಿಕೊಳ್ಳಬಹುದು.

ವೈರಲ್ ಆಗಿರುವ ಫೋಟೋ 2020 ಅಥವಾ ಅದಕ್ಕಿಂತ ಹಳೆಯದು ಎನ್ನಲಾಗಿದ್ದು, ಫೋಟೋ ಯಾವ ಸಂದರ್ಭದಲ್ಲಿ ತೆಗೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಸೌಜನ್ಯ ಪ್ರಕರಣದಲ್ಲಿ ನೀರ್ದೋಷಿಯನ್ನು ಅಪರಾಧಿ ಎಂದು ಬಿಂಬಿಸಲು ಶತಾಯಗತಾಯ ಯತ್ನಿಸಿದ ವ್ಯಕ್ತಿಯ ಜೊತೆಗೆ SIT ಮುಖ್ಯಸ್ಥರು ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ.

More articles

Latest article

Most read